ಚೆನ್ನೈ: ತಮಿಳುನಾಡಿನ ವಿದ್ಯಾರ್ಥಿಗಳಿಗೆ 'ನೀಟ್' ಪರೀಕ್ಷೆಯಿಂದ ವಿನಾಯ್ತಿ ನೀಡುವ ಮಸೂದೆಗೆ ಅಲ್ಲಿನ ವಿಧಾನಸಭೆಯಲ್ಲಿ ಮಂಗಳವಾರ ಮತ್ತೊಮ್ಮೆ ಅನುಮೋದನೆ ಪಡೆಯಲಾಗಿದೆ. ಮಸೂದೆ ಮಂಡನೆಗಾಗಿ ವಿಶೇಷ ಅಧಿವೇಶನ ಕರೆಯಲಾಗಿತ್ತು.
ಚೆನ್ನೈ: ತಮಿಳುನಾಡಿನ ವಿದ್ಯಾರ್ಥಿಗಳಿಗೆ 'ನೀಟ್' ಪರೀಕ್ಷೆಯಿಂದ ವಿನಾಯ್ತಿ ನೀಡುವ ಮಸೂದೆಗೆ ಅಲ್ಲಿನ ವಿಧಾನಸಭೆಯಲ್ಲಿ ಮಂಗಳವಾರ ಮತ್ತೊಮ್ಮೆ ಅನುಮೋದನೆ ಪಡೆಯಲಾಗಿದೆ. ಮಸೂದೆ ಮಂಡನೆಗಾಗಿ ವಿಶೇಷ ಅಧಿವೇಶನ ಕರೆಯಲಾಗಿತ್ತು.
'ನೀಟ್' ವಿನಾಯ್ತಿ ಮಸೂದೆಗೆ ತಮಿಳುನಾಡು ವಿಧಾನಸಭೆಯಲ್ಲಿ ಅನುಮೋದನೆ ನೀಡಿರುವುದು ಇದು ಎರಡನೇ ಬಾರಿ. 2021ರ ಸೆಪ್ಟೆಂಬರ್ 13ರಂದು ಈ ಹಿಂದೆ ಮಸೂದೆಗೆ ಅನುಮೋದನೆ ಪಡೆಯಲಾಗಿತ್ತು. ಬಳಿಕ ರಾಜ್ಯಪಾಲರಿಗೆ ಕಳುಹಿಸಿಕೊಡಲಾಗಿತ್ತು. ಆದರೆ, ಮಸೂದೆಯಮನ್ನು ರಾಷ್ಟ್ರಪತಿಗೆ ಕಳುಹಿಸಿಕೊಡದ ಅವರು, ಮಸೂದೆಯನ್ನು ವಾಪಸ್ ಕಳುಹಿಸಿದ್ದರು.
ಮಸೂದೆಯು ಗ್ರಾಮೀಣ ತಮಿಳುನಾಡಿನ ವಿದ್ಯಾರ್ಥಿಗಳಿಗೆ ವಿರುದ್ಧವಾಗಿದೆ ಎಂದು ರಾಜ್ಯಪಾಲರು ಹೇಳಿದ್ದರು. ಇದಕ್ಕೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹಾಗೂ ಅವರ ಸಂಪುಟ ಸಹೋದ್ಯೋಗಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ವಿಶೇಷ ಅಧಿವೇಶನ ಕರೆದು ಮಸೂದೆಯನ್ನು ಮತ್ತೊಮ್ಮೆ ಮಂಡಿಸಿ ಅನುಮೋದನೆ ಪಡೆಯುವ ಪ್ರಸ್ತಾವಕ್ಕೆ ವಿಧಾನಸಭೆಯಲ್ಲಿ ಪ್ರಾತಿನಿಧ್ಯ ಹೊಂದಿರುವ ಪಕ್ಷಗಳ ಸಭೆಯು ಶನಿವಾರ ಸಮ್ಮತಿ ಸೂಚಿಸಿತ್ತು. ಪ್ರಮುಖ ಪ್ರತಿಪಕ್ಷ ಎಐಎಡಿಎಂಕೆಯು ಈ ಸಭೆಯಲ್ಲಿ ಭಾಗವಹಿಸದಿದ್ದರೂ ರಾಜ್ಯದಲ್ಲಿ 'ನೀಟ್' ರದ್ದುಗೊಳಿಸುವ ಸರ್ಕಾರದ ನಿರ್ಣಯಕ್ಕೆ ತನ್ನ ಬೆಂಬಲವನ್ನು ನೀಡಿತ್ತು. ಬಿಜೆಪಿಯು ಸಭೆಗೆ ಗೈರಾಗಿತ್ತು.