ಕುಂಬಳೆ: ಮಾಧ್ಯಮ ಕ್ಷೇತ್ರದ ಆಧುನಿಕ ಸವಾಲುಗಳ ಮಧ್ಯೆ ಪತ್ರಕರ್ತರಾದವರು ಎದುರಿಸುತ್ತಿರುವ ಸಮಸ್ಯೆಗಳಿಗೆ ಬೆನ್ನೆಲುಬಾಗಿ ಪತ್ರಕರ್ತರ ಸಂಘಟನೆ ಇನ್ನಷ್ಟು ಬಲಗೊಳ್ಳಬೇಕು. ಪತ್ರಕರ್ತರ ಆಷೋತ್ತರಗಳಿಗೆ ಸ್ಪಂಧಿಸುವ ಸಮಾಜಿಕ ವ್ಯವಸ್ಥೆಯನ್ನು ನಿರ್ಮಾಣಮಾಡಬೇಕಿದ್ದು, ಪತ್ರಕರ್ತ ವ್ಯಕ್ತಿತ್ವಗಳನ್ನು ಮರು ರೂಪಿಸುವ ಅಗತ್ಯ ಇದೆ ಎಂದು ಕೇರಳ ಜರ್ನಲಿಸ್ಟ್ ಯೂನಿಯನ್ (ಕೆಜೆಯು) ಜಿಲ್ಲಾಧ್ಯಕ್ಷ ಲತೀಫ್ ಉಳುವಾರ್ ಹೇಳಿದರು.
ಕುಂಬಳೆ ಪ್ರೆಸ್ ಪೋರಂನಲ್ಲಿ ಗುರುವಾರ ಸಂಜೆ ನಡೆದ ಪ್ರೆಸ್ ಪೋರಂನ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಕೆಜೆಯು ಜಿಲ್ಲಾ ಖಜಾಂಜಿ ಪುರುಷೋತ್ತಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಪ್ರೆಸ್ ಪೋರಂ ಖಜಾಂಜಿ ಅಬ್ದುಲ್ ಲತೀಫ್ ಕುಂಬಳೆ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ಅಬ್ದುಲ್ಲ ಕುಂಬಳೆ ವಾರ್ಷಿಕ ವರದಿ ನೀಡಿದರು.
ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಸುರೇಂದ್ರನ್ ಚೀಮೇನಿ(ಮಾತೃಭೂಮಿ), ಕಾರ್ಯದರ್ಶಿಯಾಗಿ ಅಬ್ದಲ್ಲ ಕುಂಬಳೆ(ಕಾರವಲ್), ಖಜಾಂಜಿಯಾಗಿ ಅಬ್ದುಲ್ಲ ಲತೀಫ್ ಕುಂಬಳೆ(ಟ್ರು ನ್ಯೂಸ್), ಉಪಾಧ್ಯಕ್ಷರಾಗಿ ಪುರುಷೋತ್ತಮ ಭಟ್ ಕೆ, ತಾಹಿರ್ ಉಪ್ಪಳ, ಜೊತೆ ಕಾರ್ಯದರ್ಶಿಗಳಾಗಿ ಧನ್ ರಾಜ್ ಐಲ, ರಫೀಕ್ ಕುಂಬಳೆ ಎಂಬವರನ್ನು ಆಯ್ಕೆಮಾಡಲಾಯಿತು. ಸತ್ತಾರ್ ಮಾಸ್ತರ್ ಕುಂಬಳೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶ್ರಫ್ ಕುಂಬಳೆ ವಂದಿಸಿದರು.