ಬದಿಯಡ್ಕ: ಬಿಜೆಪಿ ಬದಿಯಡ್ಕ ಮಂಡಲ, ಪಶ್ಚಿಮ ವಲಯ ಸಮಿತಿ ಆಶ್ರಯದಲ್ಲಿ ಪಂಡಿತ್ ದೀನ್‍ದಯಾಳ್ ಉಪಾಧ್ಯಾಯ ಸಂಸ್ಮರಣಾ ದಿನ, ಸಮರ್ಪಣಾ ನಿಧಿ ಮತ್ತು 72 ಮತ್ತು 73 ಬೂತ್ ಸಮ್ಮೇಳನ ಮಾನ್ಯ ಶಾಲಾ ಪರಿಸರದಲ್ಲಿ ಜರಗಿತು. ಬದಿಯಡ್ಕ ಮಂಡಲ ಪ್ರಧಾನ ಕಾರ್ಯದರ್ಶಿ ಸುನಿಲ್ ಪಿ.ಆರ್. ಉದ್ಘಾಟಿಸಿದರು. 72ನೇ ಬೂತ್ ಸಮಿತಿ ಅಧ್ಯಕ್ಷ ಪ್ರಶಾಂತ್ ಮಾನ್ಯ, 73ನೇ ಬೂತ್ ಸಮಿತಿ ಅಧ್ಯಕ್ಷ ವರುಣ್ ಮಾನ್ಯ ಭಾಗವಹಿಸಿದರು. ಕಾಸರಗೋಡು ಬ್ಲಾಕ್ ಪಂಚಾಯಿತಿ ಸದಸ್ಯೆ, ಬದಿಯಡ್ಕ ಪಂಚಾಯಿತಿ ಪಶ್ಚಿಮ ವಲಯ ಸಮಿತಿ ಅಧ್ಯಕ್ಷೆ ಅಶ್ವಿನಿ ಭಟ್, ಬದಿಯಡ್ಕ ಮಂಡಲ ಕೋಶಾಧಿಕಾರಿ ಮಹೇಶ್ ಭಟ್ ವಳಕುಂಜ ಮಾತನಾಡಿದರು. ಬದಿಯಡ್ಕ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಸಾವಿತ್ರಿ ಎನ್ ರಾವ್, ವಿನಯ ಕುಮಾರ್ ಮಾನ್ಯ, ಹರೀಶ್ ಮುಂಡೋಡು ಸಹಿತ ಪಕ್ಷದ ಕಾರ್ಯಕರ್ತರು ನಿಧಿ ಸಮರ್ಪಣೆ ಮಾಡಿ ಪುಷ್ಪಾರ್ಚನೆಗೈದರು. ಬದಿಯಡ್ಕ ಪಂಚಾಯಿತಿ ಪಶ್ಚಿಮ ವಲಯ ಪ್ರಧಾನ ಕಾರ್ಯದರ್ಶಿ ಮಧುಚಂದ್ರ ಮಾನ್ಯ ಸ್ವಾಗತಿಸಿ, 73ನೇ ಬೂತ್ ಸಮಿತಿ ಪ್ರಧಾನ ಕಾರ್ಯದರ್ಶಿ ಉಮೇಶ ಮುಳಿಪರಂಬ ವಂದಿಸಿದರು.