ಪೆರ್ಲ: ಕೆ.ಪಿ.ಎಸ್.ಟಿ.ಎ ಕುಂಬಳೆ ಉಪಜಿಲ್ಲಾ ಸಮಿತಿಯ ವತಿಯಿಂದ, ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಸಮಯವನ್ನು ಸದುಪಯೋಗ ಪಡಿಸಿಕೊಂಡು ಬರಡು ಭೂಮಿಯಲ್ಲಿ ಅಡಿಕೆ, ತೆಂಗು ತರಕಾರಿ ಮೊದಲಾದ ಮಿಶ್ರ ವ್ಯವಸಾಯದ ಮೂಲಕ ಸಮಾಜಕ್ಕೆ ಮಾದರಿಯಾದ ಆದರ್ಶ ಕೃಷಿಕ, ಶೇಣಿ ಶಾರದಾಂಬ ಶಾಲೆಯ ಅಧ್ಯಾಪಕ ಶ್ರೀಧರ ಮಾಸ್ತರ್ ಕುಕ್ಕಿಲ ಇವರಿಗೆ ಸಮಿತಿಯ ವತಿಯಿಂದ ಅವರ ಗೃಹದಲ್ಲಿ -ಶಾಲು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ ಜೆ.ಎಸ್. ಮುಖ್ಯ ಅತಿಥಿಯಾಗಿ ಮಾತನಾಡಿ ಕೆಪಿಎಸ್ ಟಿಎ ಸಂಘಟನೆ ಕೇವಲ ಅಧ್ಯಾಪಕ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಅತೀತವಾಗಿ ಸಮಾಜಮುಖಿ ಚಟುವಟಿಕೆ ಸಮಾಜಕ್ಕೆ ಮಾದರಿಯಾದ ಅಧ್ಯಾಪಕ ಸಂಘಟನೆಯಾಗಿದೆ ಎಂದು ತಿಳಿಸಿದರು.
ಉಪ ಜಿಲ್ಲಾಧ್ಯಕ್ಷೆ ಜಲಜಾಕ್ಷಿ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕೌನ್ಸಿಲರ್ ಯೂಸುಫ್ ಕೆ, ಜಿಲ್ಲಾ ಕೋಶಾಧಿಕಾರಿ ಪ್ರಶಾಂತ್ ಕಾನತ್ತೂರು, ಶೇಣಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಶಾಸ್ತಾರ ಮಾಸ್ತರ್, ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾ ಕಾರ್ಯದರ್ಶಿ ಗೋಪಾಲಕೃಷ್ಣ ಮಾಸ್ತರ್, ಮುಖ್ಯೋಪಾಧ್ಯಾಯ ಮಹೇಶ್ ಮಾಸ್ತರ್, ರಾಧಾಕೃಷ್ಣ ಮಾಸ್ತರ್, ಕೋಶಾಧಿಕಾರಿ ಮಲ್ಲಿಕಾ ಟೀಚರ್ ಶುಭಾಶಂಸನೆಗೈದರು. ಸಂಘಟನೆಯ ಸದಸ್ಯರು, ಹಿತೈಷಿಗಳು ಉಪಸ್ಥಿತರಿದ್ದರು ಉಪಜಿಲ್ಲಾ ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಶರತ್ ಚಂದ್ರ ಶೆಟ್ಟಿ ವಂದಿಸಿದರು.