ಕಾಸರಗೋಡು: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಕಲಾತಂಡಗಳನ್ನು ಉತ್ತೇಜಿಸಲು ಜಿಲ್ಲಾ ಪಂಚಾಯಿತಿ ಬೆಂಬಲ ನೀಡುತ್ತಿದೆ. 6,30,000 ವೆಚ್ಚದಲ್ಲಿ ಖರೀದಿಸಿದ ಸಂಗೀತ ಪರಿಕರಗಳನ್ನು ಜಿಲ್ಲೆಯ ಮಾನ್ಯತೆ ಪಡೆದ ಪರಿಶಿಷ್ಟ ಜಾತಿ ಗುಂಪುಗಳಿಗೆ ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಹಿತರಕ್ಷಣಾ ಸ್ಥಾಯಿ ಸಮಿತಿ ಅಧ್ಯಕ್ಷ ಶನೋಜ್ ಚಾಕೋ ಉದ್ಘಾಟಿಸಿದರು. ಅಂಬೇಡ್ಕರ್ ತಂಡಗಳಾದ ಬೋವಿಕ್ಕಾನ, ಚಿಲಂಪ್ ತೆಯ್ಯಂ ಕಲಾಕೇಂದ್ರ ಬೇಡಡ್ಕ , ಕಿಳಕೆಪುರಂ ಸಂಘ ತೆಕ್ಕುಂಪಾಡ್, ಇಳಂಪಚ್ಚಿ, ಯುವಧಾರ ಕ್ಲಬ್ ತಿಮಿರಿ ಮತ್ತು ರಾಜೀವ್ ಗಾಂಧಿ ಬ್ಯಾಂಡ್ ಕುರಿಚಿಕುನ್ನು ಬೇಕಲಕೋಟೆ ತಂಡಗಳಿಗೆ ವಾದ್ಯಗಳನ್ನು ವಿತರಿಸಲಾಯಿತು. ಚೆಂಡೆ, ತಕಿಲ್, ಡೋಲು, ಬ್ಯೂಗಲ್, ತಾಳ ಸೇರಿದಂತೆ 12 ವಾದ್ಯಗಳನ್ನು ಕಲಾವಿದರಿಗೆ ಹಸ್ತಾಂತರಿಸಲಾಯಿತು. ಜಿಲ್ಲಾ ಪಂಚಾಯಿತಿ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್.ಎನ್.ಸರಿತಾ, ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಕೆ.ಪ್ರದೀಪನ್, ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಎಸ್.ಮೀನಾರಾಣಿ ಮಾತನಾಡಿದರು.