ಕಾಸರಗೋಡು: ಕೋಡೋ ಬೆಳ್ಳೂರು ಗ್ರಾಮ ಪಂಚಾಯಿತಿಯು ಹೊಸ ತಲೆಮಾರಿನ ಕ್ರೀಡಾ ಅಭಿರುಚಿಯನ್ನು ಬೆಳೆಸಲು ಸ್ಪೋಟ್ರ್ಸ್ ಅಕಾಡೆಮಿಯ ವಿನೂತನ ಪರಿಕಲ್ಪನೆಯನ್ನು ರೂಪಿಸಿದೆ. ಸ್ಪೋಟ್ರ್ಸ್ ಅಕಾಡೆಮಿ ಉದ್ಘಾಟನೆ ಹಾಗೂ ಕ್ರೀಡಾ ಕಿಟ್ ವಿತರಣೆ ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಎಂ. ಲಕ್ಷ್ಮಿ ನಿರ್ವಹಿಸಿದರು. 2021-22 ನೇ ಸಾಲಿನ ವಾರ್ಷಿಕ ಯೋಜನೆಯ ಅಂಗವಾಗಿ ಪಂಚಾಯತ್ ತಾಯನ್ನೂರಲ್ಲಿ ಕ್ರೀಡಾ ಅಕಾಡೆಮಿಯನ್ನು ಪಂಚಾಯತ್‍ನ ವಿವಿಧ ಹಂತಗಳಲ್ಲಿ ಕ್ರೀಡಾ ಪ್ರತಿಭೆಗಳನ್ನು ಪೋಷಿಸಲು ಸ್ಥಾಪಿಸಲಾಗುತ್ತಿದೆ. ಮಕ್ಕಳು ಮತ್ತು ಯುವಕರಿಗೆ ವಿವಿಧ ಕ್ರೀಡೆಗಳಲ್ಲಿ ತಜ್ಞರ ಮೇಲ್ವಿಚಾರಣೆಯಲ್ಲಿ ತರಬೇತಿ ನೀಡಲಾಗುವುದು.
ತಾಯನ್ನೂರು ಶಾಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷೆ ಪಿ.ಶ್ರೀಜಾ ವಹಿಸಿದ್ದರು. ರಾಜ್ಯ ಕ್ರೀಡಾ ಪರಿಷತ್ ಸದಸ್ಯ ಪ್ರೊ.ಪಿ. ರಘುನಾಥ್ ಮುಖ್ಯ ಅತಿಥಿಯಾಗಿದ್ದರು. ಯೋಜನಾ ಕಾರ್ಯನಿರ್ವಾಹಕ ಅಧಿಕಾರಿ ಗೋಪಿ ಮಾಸ್ತರ್ ಯೋಜನೆ ವಿವರಿಸಿದರು. ಕೋಡೋಂ ಬೆಳ್ಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ.ದಾಮೋದರನ್, ಪರಪ್ಪ ಬ್ಲಾಕ್ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ ಕೃಷ್ಣನ್, ಶೈಲಜಾ ಅಯ್ಯಂಕಾವು, ಎನ್.ಎಸ್.ಜಯಶ್ರೀ, ರಾಜೀವನ್ ಚಿರೋಳ್, ಇ. ಬಾಲಕೃಷ್ಣನ್, ಎಂ. ವಿ ಜಗನ್ನಾಥ್, ಸೆಬಾಸ್ಟಿಯನ್ ಮ್ಯಾಥ್ಯೂ, ರಾಮಚಂದ್ರನ್ ಮಾಸ್ತರ್ ಮತ್ತು ಸುರೇಶ್ ವಾಯಂಪ್ ಮಾತನಾಡಿದರು.