ಕುಂಬಳೆ: ಮಂಗಲ್ಪಾಡಿ ಪಂಚಾಯತಿ ಆಡಳಿತ ಮಂಡಳಿಯ ದುರಾಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ಎಸ್‍ಡಿಪಿಐ ಪ್ರತಿಭಟನೆ ಕೈಗೆತ್ತಿಕೊಂಡಿದೆ. ಮಂಗಲ್ಪಾಡಿ ಪಂಚಾಯತಿ ವ್ಯಾಪ್ತಿಯಲ್ಲಿ ಮಾಲಿನ್ಯ ಸಮಸ್ಯೆ ದೊಡ್ಡ ಸವಾಲಾಗಿದೆ. ಆದರೆ ಪಂಚಾಯತಿ ಆಡಳಿತ ಸಮಿತಿ ಯಾವುದೇ ಕ್ರಮ ಕೈಗೊಳ್ಳದಿರುವುದು ಜನತೆಗೆ ಸವಾಲಾಗಿದ್ದು, ಜನತೆ ಒಗ್ಗಟ್ಟಾಗಬೇಕಿದೆ. ಆಡಳಿತ ಮಂಡಳಿಯ ಈ ದುರಾಡಳಿತದ ವಿರುದ್ದ ಪ್ರತಿಭಟಿಸುವುದಾಗಿ ಸಂಬಂಧಪಟ್ಟವರು ಸೋಮವಾರ ಕುಂಬಳೆ ಪ[ರೆಸ್ ಪೋರಂ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಗ್ರಹಿಸಲು ಮತ್ತು ವಿಲೇವಾರಿ ಮಾಡಲು ತಕ್ಷಣ ಕ್ರಮಕೈಗೊಳ್ಳಬೇಕು.
ಆಡಳಿತ ಮಂಡಳಿಯ ನೇತೃತ್ವದಲ್ಲಿ ಭ್ರಷ್ಟಾಚಾರವನ್ನು ಕೊನೆಗೊಳಿಸಬೇಕು. ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯ ಘಟಕವನ್ನು ಸಮರ್ಥವಾಗಿ ನಡೆಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಇಂದು ಬೆಳಿÀಗ್ಗೆ 10:30ಕ್ಕೆ ಮಂಗಲ್ಪಾಡಿ ಪಂಚಾಯತಿ ಕಚೇರಿಗೆ ಎಸ್ ಡಿಪಿಐ ಪ್ರತಿಭಟನಾ ಮೆರವಣಿಗೆ ನಡೆಸಲಿದೆ.
ಎಸ್ ಡಿಪಿಐ ಮಂಗಲ್ಪಾಡಿ ಪಂಚಾಯತಿ ಎಸ್.ಡಿ.ಪಿ.ಐ ಅಧ್ಯಕ್ಷ ಇಮ್ತಿಯಾಝ್ ಉಪ್ಪಳ, ಕಾರ್ಯದರ್ಶಿ ನಾಸಿಫ್ ಬಿ.ಕೆ. ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಇಬ್ರಾಹಿಂ, ಸಿದ್ದಿಕುಲ್ ಅಕ್ಬರ್, ಕಬೀರ್ ಉಪ್ಪಳ ಗೇಟ್ ಉಪಸ್ಥಿತರಿದ್ದರು.