ಚೆನ್ನೈ: ರಾಜ್ಯ ಸರ್ಕಾರದ ಸಿಲ್ವರ್ ಲೈನ್ ಯೋಜನೆಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ತಮ್ಮ ನಿಲು ಬದಲಿಸಿ ಇಂದು ವಿರೋಧ ವ್ಯಕ್ತಪಡಿಸಿದ್ದಾರೆ. ತಿರುವನಂತಪುರದಿಂದ ಕಾಸರಗೋಡು ತಲುಪಲು ಸಿಲ್ವರ್ ಲೈನ್ ಅಗತ್ಯವಿಲ್ಲ. ವೇಗದ ಪ್ರಯಾಣಕ್ಕೆ ಸಿಲ್ವರ್ ಲೈನ್ ಯೋಜನೆ ಅಗತ್ಯವಿಲ್ಲ ಮತ್ತು ಕೇಂದ್ರ ಸರ್ಕಾರದ ವಂದೇ ಭಾರತ್ ರೈಲುಗಳು ಸಾಕು ಎಂದು ತರೂರ್ ಹೇಳಿದರು.
ಮುಖ್ಯಮಂತ್ರಿಗಳ ಅಭಿವೃದ್ಧಿಯ ಪರ ನಿಲುವನ್ನು ತಾನು ಅರ್ಥಮಾಡಿಕೊಂಡಿರುವೆ. ಆದರೆ ವಂದೇ ಭಾರತ್ ರೈಲುಗಳು ಸಿಲ್ವರ್ ಲೈನ್ ಯೋಜನೆಗೆ ಪರ್ಯಾಯವಾಗಬಹುದು. ಕೇರಳದಲ್ಲಿ ಈಗಿರುವ ರೈಲು ಮಾರ್ಗವನ್ನು ಅಭಿವೃದ್ಧಿಪಡಿಸಿದರೆ ಸಾಕು. ವಂದೇ ಭಾರತ್ ರೈಲುಗಳನ್ನು ಸಂಚರಿಸುವ ರೀತಿಯಲ್ಲಿ ರೈಲ್ವೆಗಳನ್ನು ಅಭಿವೃದ್ಧಿಪಡಿಸಬೇಕು. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಚರ್ಚೆ ನಡೆಸಬೇಕು ಎಂದು ತರೂರ್ ಹೇಳಿದರು.
ಸಿಲ್ವರ್ ಲೈನ್ ಯೋಜನೆ ವಿರುದ್ಧ ಪ್ರತಿಭಟಿಸದಿದ್ದಕ್ಕಾಗಿ ಶಶಿ ತರೂರ್ ಒಮ್ಮೆ ಕಾಂಗ್ರೆಸ್ ನಾಯಕರಿಂದ ಟೀಕೆಗೊಳಗಾಗಿದ್ದರು. ಸಿಲ್ವರ್ ಲೈನ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಹೊತ್ತಿ ಉರಿಯುತ್ತಿರುವಂತೆಯೇ ಮುಖ್ಯಮಂತ್ರಿಗಳ ಅಭಿವೃದ್ಧಿ ಯೋಜನೆಗಳನ್ನು ಹೊಗಳಿ ಶಶಿ ತರೂರ್ ಪೋಸ್ಟ್ ಹಾಕಿ ಕಾಂಗ್ರೆಸ್ಸ್ ನ ಮುಖಭಂಗಕ್ಕೆ ಕಾರಣರಾಗಿದ್ದರು. ಬಳಿಕ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಆದರೆ ಸಿಲ್ವರ್ ಲೈನ್ ಯೋಜನೆಯನ್ನು ತಾನು ಎಂದಿಗೂ ಬೆಂಬಲಿಸಲಿಲ್ಲ ಎಂದು ತರೂರ್ ಹೇಳಿಕೊಂಡಿದ್ದಾರೆ. ಸಿಲ್ವರ್‍ಲೈನ್ ಯೋಜನೆಯ ಬಗ್ಗೆ ತಿಳಿದುಕೊಂಡು ಪ್ರತಿಕ್ರಿಯಿಸುವೆ ಎಂಬ ನಿಲುವು ತಳೆದಿರುವುದಾಗಿ ತರೂರ್ ಹೇಳಿದ್ದರು.