ಮಂಜೇಶ್ವರ: ಕೆ.ಪಿ.ಎಸ್.ಟಿ.ಎ. ಮಂಜೇಶ್ವರ ಉಪಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಕಛೇರಿಯ ಮುಂದೆ ಪ್ರತಿಭಟನಾ ಧರಣಿ ನಡೆಯಿತು.
ಅಧ್ಯಾಪಕರ ಅಭಿಪ್ರಾಯ ಸ್ವಾತಂತ್ರ್ಯ ತಡೆ, ಎಸ್.ಎಸ್.ಎಲ್.ಸಿ, ಪ್ಲಸ್ ಟು ಪೋಕಸ್ ಏರಿಯಾ ನಿರ್ಣಯಿಸಿದ ಮಾನದಂಡಗಳ ನ್ಯೂನತೆಗಳನ್ನು ಪರಿಹರಿಸಬೇಕು, ಸಾರ್ವಜನಿಕ ವಿದ್ಯಾಲಯವನ್ನು ಸಂರಕ್ಷಿಸಬೇಕು, ನೌಕರರನ್ನು ವಂಚಿಸಿದ ಸರ್ಕಾರದ ನೀತಿಗೆ ದುರಾಗಿ ಪ್ರತಿಭಟನೆ ಮೊದಲಾದ ಬೇಡಿಕೆಗಳನ್ನು ಇಟ್ಟು ಉಪ ಜಿಲ್ಲಾ ವಿದ್ಯಾಧಿಕಾರಿ ಕಚೇರಿ ಧರಣಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಕೆ ಪಿ ಎಸ್ ಟಿ ಎ ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷ ವಿಮಲ್ ಆಡಿಯೋಡಿ ವಹಿಸಿದರು. ಕೆ ಪಿ ಎಸ್ ಟಿ ಎ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಉದ್ಘಾಟಿಸಿದರು. ಸಭೆಯಲ್ಲಿ ಜಿಲ್ಲಾ ಜೊತೆ ಕಾರ್ಯದರ್ಶಿ ಜನಾರ್ಧನ ಕೆ. ವಿ., ಕೆ ಪಿ ಎಸ್ ಟಿ ಎ ಅಲ್ಪಸಂಖ್ಯಾತ ಜಿಲ್ಲಾ ಘಟಕಾಧ್ಯಕ್ಷ ರಾಧಾಕೃಷ್ಣನ್ ಆರ್, ಜಾಫರ್ ಹೇರೂರು ಶುಭಾಶಂಸನೆಗೈದರು. ಉಪ ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ತರ್ ಸ್ವಾಗತಿಸಿ, ಉಪ ಜಿಲ್ಲಾ ಉಪಾಧ್ಯಕ್ಷ ಮೂಸ ಕುಂಞ. ಡಿ ಕಡಂಬಾರು ವಂದಿಸಿದರು.