ನವದೆಹಲಿ: ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ವಿದೇಶಾಂಗ ಸಚಿವಾಲಯ ನಿರ್ದಿಷ್ಟ ಟ್ವಿಟ್ಟರ್ ಖಾತೆ '' "OpGanga Helpline" (@opganga)ಯನ್ನು ಆರಂಭಿಸಿದೆ.
ಉಕ್ರೇನ್ ನಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರ ಮಾಡುವ ಕಾರ್ಯಕ್ಕೆ ಆಪರೇಷನ್ ಗಂಗಾ ಎಂದು ಕರೆಯಲಾಗುತ್ತದೆ. ಭಾರತ ಸರ್ಕಾರ ಈಗಾಗಲೇ 24x7 ನಿಯಂತ್ರಣ ಕೊಠಡಿಯನ್ನು ಪೋಲೆಂಡ್, ರೊಮಾನಿಯಾ, ಹಂಗೇರಿ ಮತ್ತು ಸ್ಲೊವಾಕಿಯಾಗಳಲ್ಲಿ ಸ್ಥಾಪಿಸಿದ್ದು ಗಡಿ ಕೇಂದ್ರಗಳ ಮೂಲಕ ಉಕ್ರೇನ್ ನಿಂದ ಭಾರತೀಯರನ್ನು ಸ್ಥಳಾಂತರ ಮಾಡಲು ಈ ಕೇಂದ್ರಗಳ ಮೂಲಕ ಸಹಾಯವಾಗಲಿದೆ.
ಪೋಲೆಂಡ್‌ನಲ್ಲಿನ ನಿಯಂತ್ರಣ ಕೊಠಡಿಯ ಸಹಾಯವಾಣಿ ಸಂಖ್ಯೆಗಳು: +48225400000, +48795850877 ಮತ್ತು +48792712511. MEA ಪ್ರಕಾರ, ಸಹಾಯದ ಅಗತ್ಯವಿರುವವರು controlroominwarsaw@gmail.com ಗೆ ಇಮೇಲ್ ಮಾಡಬಹುದು.
ರೊಮೇನಿಯಾದಲ್ಲಿನ ನಿಯಂತ್ರಣ ಕೊಠಡಿಯ ಸಹಾಯವಾಣಿ ಸಂಖ್ಯೆಗಳು: +40732124309, +40771632567, +40745161631 ಮತ್ತು +40741528123. ರೊಮೇನಿಯಾದಲ್ಲಿ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಲು ಇಮೇಲ್ ವಿಳಾಸ controlroombucharest@gmail.com ಆಗಿದೆ.
ಭಾರತೀಯರು ಹಂಗೇರಿಯಲ್ಲಿರುವ ನಿಯಂತ್ರಣ ಕೊಠಡಿಯನ್ನು +36 308517373, +36 13257742 ಮತ್ತು +36 13257743 ನಲ್ಲಿ ಸಂಪರ್ಕಿಸಬಹುದು ಎಂದು MEA ತಿಳಿಸಿದೆ. WhatsApp ಸಂಖ್ಯೆ: +36 308517373 ಅನ್ನು ಸಹ ಹೊಂದಿದೆ.
ಸ್ಲೋವಾಕಿಯಾದಲ್ಲಿನ ನಿಯಂತ್ರಣ ಕೊಠಡಿಯ ಸಹಾಯವಾಣಿ ಸಂಖ್ಯೆಗಳು +421 252631377, +421 252962916 ಮತ್ತು +421 951697560. ಇಮೇಲ್ ವಿಳಾಸವು hoc.bratislava@mea.gov.in ಆಗಿದೆ.
ನಿನ್ನೆ ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಭಾರತೀಯ ವಿದ್ಯಾರ್ಥಿಗಳ ರಕ್ಷಣೆ ಮತ್ತು ಅವರನ್ನು ಭಾರತಕ್ಕೆ ಸ್ಥಳಾಂತರ ಮಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.
ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರವನ್ನು ತ್ವರಿತಗೊಳಿಸಲು ಉಕ್ರೇನ್‌ನ ನೆರೆಯ ರಾಷ್ಟ್ರಗಳೊಂದಿಗೆ ಸಹಕಾರವನ್ನು ಇನ್ನಷ್ಟು ಹೆಚ್ಚಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಸಭೆಯಲ್ಲಿ ಭಾಗವಹಿಸಿದ್ದರು, ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಸೇರಿದಂತೆ ಉನ್ನತ ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು. ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.