ಕಾಸರಗೋಡು: ಕರ್ನಾಟಕ ಸಂಗೀತದ ಪಿತಾಮಹ ಸಂತ ತ್ಯಾಗರಾಜರ ಆರಾಧನೆ ಕಾರ್ಯಕ್ರಮ ವಿದ್ಯಾನಗರದ ಚಿನ್ಮಯ ವಿದ್ಯಾಲಯದಲ್ಲಿ ಜರುಗಿತು. ಚಿನ್ಮಯ ವಿದ್ಯಾಲಯದ ಅಧ್ಯಕ್ಷ ಪೂಜ್ಯ ಸ್ವಾಮಿ ವಿವಿಕ್ತಾನಂದ ಸರಸ್ಪತಿ ಸಮಾರಂಭ ಉದ್ಘಾಟಿಸಿ ಮಾತನಾಡಿ, 18ನೇ ಶತಮಾನದ ಸಂತ ತ್ಯಾಗ ರಾಜರು ಧನಕನಕ ಸಂಪತ್ತನ್ನು ತ್ಯಜಿಸಿ ಶ್ರೀರಾಮ ಧ್ಯಾನದಿಂದ ಮುಕ್ತಿ ಮಾಗ9ವನ್ನು
ಕಂಡುಕೊಂಡವರು. ಭಿಕ್ಷಾಟನೆ ಮಾಡುತ್ತಾ ರಾಮ ಭಕ್ತಿಯನ್ನು ಮೆರೆಯುವುದರೊಂದಿಗೆ ಎರಡು ಸಾವಿರದಷ್ಟು ಕೀರ್ತನೆಗಳನ್ನು ತೆಲುಗಿನಲ್ಲಿ ರಚಿಸಿ ಕರ್ನಾಟಕ ಸಂಗೀತಕ್ಕೆ ಅನನ್ಯ ಕೊಡುಗೆಯನ್ನು ನೀಡಿದ್ದಾರೆ. ಅವರ ಆರಾಧನೆಯನ್ನು ನಡೆಸುವ ಮೂಲಕ ತ್ಯಾಗರಾಜರಿಗೆ ಹಾಗೂ ಅವರ ಸಂಗೀತಕ್ಕೆ ನಾವು ಗೌರವ ಸಲ್ಲಿಸಲು ಸಾಧ್ಯ ಎಂದು ತಿಳಿಸಿದರು.
ಚಿನ್ಮಯ ವಿದ್ಯಾಲಯದ ಸಂಗೀತ ವಿದುಷಿ ದಿವ್ಯಾ ಮಹೇಶ್ ಹಂಸಧ್ವನಿ , ಆದಿತಾಳದಲ್ಲಿ ಗಣೇಶ ಸ್ತುತಿಯ ಮೂಲಕ ತ್ಯಾಗರಾಜರ ಪಂಚರತ್ನ ಕೃತಿಗಳನ್ನು ಆಲಾಪಿಸಿದರು. ನಂತರ ಹನುಮಂತ ಕೀರ್ತನೆಯೊಂದಿಗೆ ಮುಕ್ತಾಯಗೊಂಡಿತು. ವಿದುಷಿ ದಿವ್ಯಾ ಮಹೇಶ್ ಅವರೊಂದಿಗೆ ಕುಮಾರಿಯರಾದ ದಿಶಾ ಹಾಗೂ ಸನ್ನಿಧಿ ಟಿ.ರೈ ಸಹಕರಿಸಿದರು. ಶ್ರೀಧರ ರೈ ಮೃದಂಗ, ನಟರಾಜ ಕಲ್ಲೂರಾಯ ಪಿಟೀಲಿನಲ್ಲಿ ಸಹಕರಿಸಿದರು.
ವಿದ್ಯಾಲಯದ ನಿರ್ದೇಶಕ ಬಿ. ಪುಷ್ಪರಾಜ್, ಮುಖ್ಯೋಪಾಧ್ಯಾಯಿನಿಯರಾದ ಶ್ರೀಮತಿ ಸಿಂಧು ಶಶೀಂದ್ರನ್, ಎಸ್.ಆರ್ ರ್ಪೂರ್ಣಿಮ ಹಾಗೂ ಅನೇಕ ಸಂಗೀತಾರಾಧಕರು ಉಪಸ್ಥಿತರಿದ್ದರು.