ಕುಂಬಳೆ: ಮೊಗ್ರಾಲ್ ಪುತ್ತೂರು ಪಂಚಾಯತಿ ನೇತೃತ್ವದಲ್ಲಿ ಮೊಗ್ರಾಲ್ ನದಿಯ ದಡದಲ್ಲಿ ಕಾಂಡ್ಲಾ ಗಿಡಗಳ ನಾಟಿ ನಡೆಸಲಾಯಿತು. ಈಗ ಮೊಗ್ರಾಲ್ ನದಿಯಲ್ಲಿ ಕಾಂಡ್ಲಾ ಸಮೃದ್ದತೆ ಕಾಣಿಸಲಿದೆ.
ಗ್ರಾಮ ಪಂಚಾಯಿತಿಯ 2021-22ನೇ ಸಾಲಿನ ಯೋಜನೆಯ ಅಂಗವಾಗಿ ಮೊಗ್ರಾಲ್ ನದಿಯ ದಡದಲ್ಲಿ ಕಾಂಡ್ಲಾ ನೆಡುವ ಯೋಜನೆಯನ್ನು ಅಧ್ಯಕ್ಷ ನ್ಯಾಯವಾದಿ ಸಮೀರ ಫೈಸಲ್ ಉದ್ಘಾಟಿಸಿದರು. ಕೃಷಿ ಅಧಿಕಾರಿ ಎಸ್.ಎಸ್.ಸಾಜು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ದಿವಾಕರನ್ ಕಡಿಂಜಿಮೂಲೆ ಕಾಂಡ್ಲಾ ವನಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಕೃಷಿ ಇಲಾಖೆ, ಜೀವನ್-ನೀಲೇಶ್ವರ, ಕಾಸರಗೋಡು ಸರ್ಕಾರಿ ಕಾಲೇಜು ಎನ್‍ಎಸ್‍ಎಸ್ ಘಟಕ ಮತ್ತು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಸ್ಥಳೀಯ ಸ್ವಯಂಸೇವಕರು ಕೈಜೋಡಿಸಿದರು. ಯೋಜನೆಯ ಭಾಗವಾಗಿ, ಕಾ|ಂಡ್ಲಾ ಸಮುದಾಯಕ್ಕೆ ಸೇರಿದ 3,000 ಗಿಡಗಳನ್ನು ನೆಡಲಾಯಿತು. ಸುಮಾರು ಒಂದು ಕಿಲೋಮೀಟರ್ ಉದ್ದವಿರುವ ಮೊಗ್ರಾಲ್ ನದಿಯನ್ನು ಇನ್ನು ಕಾಂಡ್ಲಾ ವನಗಳನ್ನು ಬೆಳೆಸಿ ಸಂರಕ್ಷಿಸಲಾಗುವುದು ಎಂದು ಪಂಚಾಯಿತಿ ಅಧ್ಯಕ್ಷೆ ನ್ಯಾಯವಾದಿ ಸಮೀರ ಫೈಸಲ್ ಹೇಳಿದರು.