ಕಾಸರಗೋಡು: ಉದಯಗಿರಿಯಲ್ಲಿ ಜಿಲ್ಲಾ ಕ್ರೀಡಾ ಪರಿಷತ್ತಿನ ನೂತನ ಕಚೇರಿ ಕಟ್ಟಡದ ಶಂಕುಸ್ಥಾಪನೆಯನ್ನು ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಪಿ.ಹಬೀಬ್ ರಹಮಾನ್ ನೆರವೇರಿಸಿದರು. ರಾಜ್ಯ ಕ್ರೀಡಾ ಮಂಡಳಿಯಿಂದ ಮಂಜೂರಾದ `21,87000 ರೂ. ವೆಚ್ಚದಲ್ಲಿ ಜಿಲ್ಲಾ ನಿರ್ಮಿತಿ ಕೇಂದ್ರದಿಂದ ನಿರ್ಮಾಣವಾಗಲಿರುವ ಕಚೇರಿ ಕಟ್ಟಡ ಮೇ ತಿಂಗಳಲ್ಲಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಲಿದೆ.
ಜಿಲ್ಲಾ ಕ್ರೀಡಾ ಮಂಡಳಿ ಉಪಾಧ್ಯಕ್ಷ ಪಿ.ಪಿ. ಅಶೋಕನ್, ರಾಜ್ಯ ಕ್ರೀಡಾ ಮಂಡಳಿ ಸದಸ್ಯ ಬಾಲನ್, ಜಿಲ್ಲಾ ಕ್ರೀಡಾ ಮಂಡಳಿಯ ಕಾರ್ಯಕಾರಿ ಸದಸ್ಯರಾದ ಪಿ.ಅನಿಲ್, ಟಿ.ವಿ.ಕೃಷ್ಣನ್, ಪಲ್ಲಂ ನಾರಾಯಣನ್, ವಿ.ವಿ.ವಿಜಯ ಮೋಹನನ್, ಜಿಲ್ಲಾ ಕ್ರೀಡಾ ಮಂಡಳಿ ಕಾರ್ಯದರ್ಶಿ ಎಂ.ಎಸ್.ಸುದೀಪ್ ಬೋಸ್, ಜಿಲ್ಲಾ ನಿರ್ಮಿತಿ ಕೇಂದ್ರದ ಎಂಜಿನಿಯರ್ ಕೃಷಿತ್ ಕುಮಾರ್ ಮಾತನಾಡಿದರು.