ಪೆರ್ಲ: ಪೆರ್ಲ ಸನಿಹದ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಹಿತ್ತಿಲಿಗೆ ಬೆಂಕಿ ತಗುಲಿದ ಪರಿಣಾ ಅಪಾರ ನಾಶನಷ್ಟ ಸಂಭವಿಸಿದೆ. ದೇವಸ್ಥಾನ ವತಿಯಿಂದ ನಿರ್ಮಿಸಲಾದ ಔಷಧೀಯ ಸಸ್ಯಗಳು ಸೇರಿದಂತೆ ಹಲವು ಪ್ರಭೇದಗಳ ವೃಕ್ಷಗಳನ್ನೊಳಗೊಂಡ ಈಶ ವನ ಸಂಪೂರ್ಣ ಹಾನಿಗೀಡಾಗಿದೆ. ಬೃಹತ್ ವೃಕ್ಷವಾಗಬಲ್ಲ ಮರಗಳಿಂದ ತೊಡಗಿ ಔಷಧೀಯ ವೃಕ್ಷಗಳನ್ನೊಳಗೊಂಡ ಈಶವನದೊಳಗೆ ಬೆಂಕಿ ವ್ಯಾಪಿಸಿ ಕ್ಷಣಾರ್ಧದಲ್ಲಿ ಇತರ ಪ್ರದೇಶಗಳಿಗೆ ವ್ಯಾಪಿಸಿದೆ. 2015ರಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಊರವರ ಸಹಕಾರದೊಂದಿಗೆ ನಿರ್ಮಿಸಲಾಗಿರುವ ಈಶವನದಲ್ಲಿನ ಅಪಾರ ಸಸ್ಯ ಸಂಪತ್ತು ಬೆಂಕಿಯ ಕೆನ್ನಾಲಿಗೆಗೆ ಕರಟಿಹೋಗಿದೆ.
ಈ ಪ್ರದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಹುಲ್ಲುಗಾವಲಿಗೆ ಬೆಂಕಿ ತಗಲುತ್ತಿದ್ದು, ಸೂಕ್ತ ಮುಂಜಾಗ್ರತೆ ಕೊರತೆಯಿಂದ ಬೆಂಕಿ ಆಕಸ್ಮಿಕ ಮರುಕಳಿಸುತ್ತಿದೆ. ಸ್ಥಳಿಯ ಯುವಕರು ಸಏರಿದಂತೆ ಹಲವಾರು ಮಂದಿ ಬೆಂಕಿಶಮನಗೊಳಿಸಲು ಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ. ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ತಗಲಿರುವ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದೆ. ಕಾಸರಗೋಡಿನ ಅಗ್ನಿಶಾಮಕ ದಳ ನೆರವಿನಿಂದ ದೀರ್ಘ ಕಾಲದ ಪ್ರಯತ್ನದ ನಂತರ ಬೆಂಕಿ ಶಮನಗೊಳಿಸಲಾಗಿದೆ.