HEALTH TIPS

ಮನೆಯೊಳಗೆ ನುಗ್ಗುತ್ತಿದ್ದ ನಾಗರಹಾವನ್ನು ಹಿಡಿದು ರಕ್ಷಿಸಿದ ಮಹಿಳಾ ಫಾರೆಸ್ಟ್ ಆಫೀಸರ್! ವಿಡಿಯೋ ವೈರಲ್

           ತಿರುವನಂತಪುರಂ: ಮನೆಯೊಳಗೆ ನುಗ್ಗುತ್ತಿದ್ದ ನಾಗರಹಾವೊಂದನ್ನು ಅರಣ್ಯ ಇಲಾಖೆಯ ಮಹಿಳಾ ಸಿಬ್ಬಂದಿಯೊಬ್ಬರು ಹಿಡಿದು ರಕ್ಷಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.


           ಇತ್ತೀಚಿಗೆ ಕಟ್ಟಕಡದ ಜನವಸತಿ ಪ್ರದೇಶದಲ್ಲಿ ಮನೆಯೊಂದಕ್ಕೆ ನುಗುತ್ತಿದ್ದ ನಾಗರಹಾವೊಂದನ್ನು ಧೈರ್ಯಶೀಲ ಅರಣ್ಯ ಸಿಬ್ಬಂದಿ ರೋಶಿಣಿ ಹಿಡಿದು ಬ್ಯಾಗ್ ನೊಳಗೆ ಬಿಡುವ ಮೂಲಕ ರಕ್ಷಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಶೇರ್ ಆಗಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

A brave Forest staff Roshini rescues a snake from the human habitations at Kattakada. She is trained in handling snakes.

Women force in Forest depts across the country is growing up in good numbers. VC @jishasurya pic.twitter.com/TlH9oI2KrH

          ಐಎಫ್ಎಸ್ ಅಧಿಕಾರಿ ಸುಧಾ ರಾಮನ್ ತಮ್ಮ ಟ್ವೀಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಧೈರ್ಯ ಶಾಲಿ ಅರಣ್ಯ ಸಿಬ್ಬಂದಿ ರೋಶಿಷಿ ಜನವಸತಿ ಪ್ರದೇಶದಲ್ಲಿ ಹಾವನ್ನು ರಕ್ಷಿಸಿದ್ದಾರೆ. ಇವರು ಹಾವುಗಳನ್ನು ರಕ್ಷಿಸುವಲ್ಲಿ ತರಬೇತಿ ಪಡೆದಿದ್ದಾರೆ. ದೇಶಾದ್ಯಂತ ಅರಣ್ಯ ಇಲಾಖೆಗಳಲ್ಲಿ ಮಹಿಳಾ ಪಡೆ ಉತ್ತಮ ಸಂಖ್ಯೆಯಲ್ಲಿ ಬೆಳೆಯುತ್ತಿದೆ ಎಂದು ಸುಧಾ ರಾಮನ್ ಖುಷಿ ವ್ಯಕ್ತಪಡಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries