ಕೊಚ್ಚಿ: ಅಹಮದಾಬಾದ್ ಸ್ಫೋಟ ಪ್ರಕರಣದಲ್ಲಿ 38 ಭಯೋತ್ಪಾದಕರಿಗೆ ಮರಣದಂಡನೆ ಶಿಕ್ಷೆ ವಿಧಿಸಿರುವುದನ್ನು ವಿರೋಧಿಸಿ ಕೇರಳದ ವಿವಿಧೆಡೆ ಪಾಪ್ಯುಲರ್ ಫ್ರಂಟ್ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದಿವೆ. ಮರಣಣದಂಡನೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಹಲವೆಡೆ ಪ್ರತಿಭಟನೆಗಳು ನಡೆದವು.
‘ಇದು ತೀರ್ಪಲ್ಲ, ಆಡಳಿತ ವರ್ಗದ ಹತ್ಯಾಕಾಂಡ’ ಎಂಬ ಘೋಷಣೆಯಡಿ ಧರಣಿ ನಡೆಸಲಾಯಿತು. ಈ ಘೋಷಣೆಯಡಿ ಪಾಪ್ಯುಲರ್ ಫ್ರಂಟ್ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ ಭಾಷಣ ಮಾಡುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್, ಬ್ಯಾನರ್ ಗಳನ್ನು ಹಾಕಲಾಗಿದೆ. ರಾಜ್ಯದ ವಿವಿಧ ಮೂಲೆಗಳಲ್ಲಿ ಒಂದೇ ರೀತಿಯ ಪೋಸ್ಟರ್‌ಗಳನ್ನು ಕಟ್ಟಲಾಗಿದೆ. ಪಾಪ್ಯುಲರ್ ಪ್ರಂಟ್ ನ್ಯಾಯಾಲಯದ ತೀರ್ಪಿನ ವಿರುದ್ಧ ದ್ವೇಷ ಅಭಿಯಾನವನ್ನು ನಡೆಸುತ್ತಿದೆ. ಇದರ ವಿರುದ್ಧ ಪೊಲೀಸ್ ಮೊಕದ್ದಮೆ ದಾಖಲಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ಹೆಚ್ಚುತ್ತಿದೆ.
ಇದೇ ವೇಳೆ ನ್ಯಾಯಾಲಯದ ತೀರ್ಪಿನ ವಿರುದ್ಧ ಪ್ರತಿಭಟನೆ ನಡೆಸಲು ಕಣ್ಣೂರು ಜಿಲ್ಲೆಗೆ ಆಗಮಿಸಿದ್ದ ಪಾಪ್ಯುಲರ್ ಫ್ರೆಂಟ್ ಕಾರ್ಯಕರ್ತರ ಬಳಿ ಆಯುಧಗಳು ಇರುವುದು ದೃಢಪಟ್ಟಿದೆ. ಉದ್ದೇಶಿತ ಪ್ರತಿಭಟನೆಯಲ್ಲಿ ಆಯುಧವನ್ನು ಪೊಲೀಸರು ವಶಪಡಿಸಿಕೊಂಡರು. ಪ್ರತಿಭಟನೆ ಅಂತ್ಯಗೊಳ್ಳುವ ಮೊದಲೇ ನಿಲ್ಲಿಸುವಂತೆ ಪೋಲೀಸರು ಸೂಚಿಸಿದರು. ಇದೇ ವೇಳೆ ಪಾಪ್ಯುಲರ್ ಫ್ರೆಂಟ್ ಕೂಡ ಪೊಲೀಸರನ್ನು ಅವಹೇಳನಗ್ಯೆದಿದೆ ಎಂದು ವರದಿಗಳು ಹೇಳಿವೆ.