ಕಾಸರಗೋಡು: ರಬ್ಬರ್ ವ್ಯಾಪಾರಿಗಳ ಏಕಸ್ವಾಮ್ಯದಿಂದ ಇಂದು ಕಚ್ಛಾ ರಬ್ಬರ್ ಧಾರಣೆಯಲ್ಲಿ ಗಣನೀಯ ಇಳಿಕೆ ಕಂಡು ಬರುತ್ತಿದ್ದು, ಇದಕ್ಕೆ ಪರಿಹಾರವಾಗಿ ಕೃಷಿಕರ ಒಟ್ಟುಗೂಡಿವಿಕೆಯೊಂದಿಗೆ ಟಯರ್ ನಿರ್ಮಾಣ ಘಟಕ ಆರಂಭಿಸಲು ಮುಂದಾಗಬೇಕು ಎಂಬುದಾಗಿ ರಾಯಲ್ ಟ್ರಾವಂಕೂರ್ ಫಾರ್ಮರ್ಸ್ ಪ್ರೊಡ್ಯೂಸರ್ಸ್ ಕಂಪೆನಿ ಲಿಮಿಟೆಡ್ ಸಂಸ್ಥೆ ಮ್ಯಾನೇಜಿಂಗ್ ಡೈರೆಕ್ಟರ್ ರಾಹುಲ್ ಚಕ್ರಪಾಣಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೇರಳದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ರಬ್ಬರ್ ಬೆಲೆ ಕುಸಿತದಿಂದ ಸಾವಿರಾರು ಮಂದಿ ಕೃಷಿಕರು ಕಂಗಾಲಾಗಿದ್ದಾರೆ. ರಬ್ಬರ್ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಬ್ಬರ್ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಹೆಚ್ಚಳಗೊಳಿಸಬೇಕು ಎಂದು ತಿಳಿಸಿದರು. ಕೃಷಿಯ ಉತ್ತೇಜನದ ಜತೆಗೆ ವ್ಯಾಪಾರ ಅಭಿವೃದ್ಧಿ ದೃಷ್ಟಿಯಲ್ಲಿರಿಸಿ ರಾಯಲ್ ಟ್ರಾವಂಕೂರ್ ಫಾರ್ಮರ್ಸ್ ಪ್ರೊಡ್ಯೂಸರ್ಸ್ ಕಂಪೆನಿ ಜನರ ಬಳಿ ಬರುತ್ತಿದೆ. ಸಂಸ್ಥೆ ಮೂಲಕ ಕೃಷಿ ಸಾಲದ ಜತೆಗೆ ಚಿನ್ನದ ಈಡಿನ ಮೇಲೆ, ವ್ಯಾಪಾರ, ವಸ್ತುಗಳ ಮೇಲಿನ ಸಾಲವನ್ನೂ ನೀಡುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ದೀಪು ಮೋನ್ ಜೋಸ್, ವಕೀಲ ಪಿ.ವಿ ಶಾಜಿ, ಪಿ. ಮನೋಜ್, ಶಿಜೋ ಜೋಸೆಫ್ ಉಪಸ್ಥಿತರಿದ್ದರು.