ಮಂಜೇಶ್ವರ: ಶ್ರೀ ಉಳ್ಳಾಲ್ತಿ ಮೈಸಂದಾಯ ದೈವಸ್ಥಾನ ಕುಳೂರು ಇದರ ವಾಮಂಜೂರು ವಿಭಾಗದ ತರವಾಡು ಮನೆಯ ಗೃಹ ಪ್ರವೇಶ, ದೈವಗಳ ಪೀಠ ಪ್ರತಿಷ್ಠೆ ಹಾಗೂ ದೈವಗಳ ನೇಮೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷÀ ಸೋಮನಾಥ ಅರಿಮಲೆ ಇವರ ಅಧ್ಯಕ್ಷತೆಯಲ್ಲಿ ಸಾಮಾಜಿಕ ಧಾರ್ಮಿಕ ಮುಂದಾಳು, ಬಿ.ಎಸ್.ಎಸ್.ಎಸ್ ನ ಕೇಂದ್ರ ಸಮಿತಿಯ ಗೌರವ ಸಲಹೆಗಾರ ವಿಜಯ್ ಪಂಡಿತ್ ಉಪ್ಪಳ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು, ತರವಾಡುಗಳ ಜೀರ್ಣೋದ್ಧಾರ ಕಾರ್ಯಕ್ರಮ ದ ಮೂಲಕ ಬಂಧುಗಳ ಪರಸ್ಪರ ಒಂದುಗೂಡುವಿಕೆಗೆ ಒಂದು ವೇದಿಕೆಯಾಗುತ್ತದೆ ಮತ್ತು ಮಾನವೀಯ ಸಂಬಂಧ ಹೆಚ್ಚಾಗುತ್ತದೆ. ಆದುದರಿಂದ ತರವಾಡುಗಳ ಉತ್ತಮ ಕಾರ್ಯ ಚಟುವಟಿಕೆ ಗೆ ನಾವೆಲ್ಲರೂ ಪಣತೊಡಬೇಕೆಂದು ಕರೆನೀಡಿದರು.
ಕಾರ್ಯಕ್ರಮದಲ್ಲಿ ಕುಳೂರು ದೈವಸ್ಥಾನದ ದೈವದಪಾತ್ರಿಗಳಾದ ಪೂವಪ್ಪ ವಾಮಂಜೂರು, ಸುರೇಶ್ ಕುಂಜತ್ತೂರು, ಜೀರ್ಣೋದ್ಧಾರ ಸಮಿತಿಯ ಗೌರವಾದ್ಯಕ್ಷ ಸೇಸಪ್ಪ ಚೆ0ಬಪದವು, ಮುರುಗೇಶ್ ಪಚ್ಲಂಪಾರೆ, ಹರೀಶ ಮಾಸ್ತರ್ ಅಂಗಡಿಪದವು,ರಾಮಚಂದ್ರ ಬಂಬ್ರಾಣ, ಹರೀಶ್ ಕತ್ತೆರಿಕೊಡಿ,ಪ್ರವೀಣ್ ಅರಿಮಲೆ, ಸರೋಜಿನಿ ಮಂಗಲ್ಪಾಡಿ, ಸೀತಾ ತಲಪಾಡಿ, ವಿಶಾಲಾಕ್ಷಿ ಬೆಜ್ಜ, ಜಯಪ್ರಕಾಶ್ ಮಂಜೇಶ್ವರ,ಚಂದ್ರಹಾಸ ಕತ್ತೇರಿಕೋಡಿ ಹಾಗೂ ಸಮಿತಿಯ ಪಧಾಧಿಕಾರಿಗಳು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ಸ್ವಾಗತಿಸಿ ,ಆಶಾ ಕುಬಣೂರು ವಂದಿಸಿದರು. ಅಕ್ಷ್ಮೀತಾ ಬೆಜ್ಜ ಕಾರ್ಯಕ್ರಮ ನಿರೂಪಿಸಿದರು.