ಕಾಸರಗೋಡು: ಕಾಸರಗೋಡು ಕಲೆಕ್ಟರೇಟ್ ಆವರಣದಲ್ಲಿ ನಿನ್ನೆ ಮಕ್ಕಳ ಚಿಲಿಪಿಲಿಗಳೊಂದಿಗೆ ಪುಟಾಣಿ ಶಾಲೆ ಪುನಃರಾರಂಭಗೊಂಡಿತು. ಕೋವಿಡ್ ಬಳಿಕ ರಾಜ್ಯದಲ್ಲಿ ಅಂಗನವಾಡಿಗಳು ಸಕ್ರಿಯಗೊಂಡ ನಂತರ ಕಲೆಕ್ಟರೇಟ್ ಆವರಣದಲ್ಲಿ ಕ್ರಷ್ ಕಾರ್ಯಾಚರಣೆ ಪುನರಾರಂಭವಾಯಿತು.
ಶಿಕ್ಷಕಿ ಆಶಾ ನಾರಾಯಣನ್, ಸಹಾಯಕಿ ಕೆ.ಸುಮನಾ ಮತ್ತು ಏಳು ಮಕ್ಕಳು ಮೊದಲ ದಿನ ತರಗತಿಗೆ ಆಗಮಿಸಿದ್ದರು. ಕಲೆಕ್ಟರೇಟ್ ಸಿಬ್ಬಂದಿಯ ಮಕ್ಕಳಿಗಾಗಿ 2011 ರಲ್ಲಿ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದ ಕ್ರಷ್ ನಂತರ ಸಮೀಪದ ಪ್ರದೇಶಗಳ 34 ಮಕ್ಕಳನ್ನು ಹೊಂದಿತ್ತು. ಮತ್ತೆ ಕ್ರಶ್ ತರಗತಿಗಳು ಆರಂಭವಾಗಿದೆ ಎಂದು ತಿಳಿದರೆ ಹೆಚ್ಚು ಮಕ್ಕಳು ಬರುತ್ತಾರೆ ಎಂದು ಶಿಕ್ಷಕಿ ಆಶಾ ನಾರಾಯಣನ್ ಹೇಳಿದರು.