ಕಣ್ಣೂರು: ಕೇರಳದಲ್ಲಿ ವಿವಾಹ ಸಂಬಂಧಿಸಿದ ಘಟನೆಗಳನ್ನು ಸುಸಂಸ್ಕøತರೂ ಒಪ್ಪಲಾಗದು ಎಂದು ಮಾಜಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹೇಳಿದ್ದಾರೆ. ಕಣ್ಣೂರಿನಲ್ಲಿ ನಡೆದ ಸಾವು ಅತ್ಯಂತ ಶೋಚನೀಯ ಬೆಳವಣಿಗೆಗಳ ಮುಂದುವರಿಕೆ ಎಂದು ಅವರು ಫೇಸ್‍ಬುಕ್ ಪೋಸ್ಟ್‍ನಲ್ಲಿ ಹೇಳಿದ್ದಾರೆ.
ಕೆ.ಕೆ.ಶೈಲಜಾ ಅವರ ಫೇಸ್‍ಬುಕ್ ಪೋಸ್ಟ್ ಹೀಗಿದೆ:
ನಮ್ಮಲ್ಲಿ ಸಮಾಜವಿರೋಧಿ ಕೃತ್ಯಗಳು ಆಚರಣೆಗಳ ನೆಪದಲ್ಲಿ ನಡೆಸುವುದು ಹೆಚ್ಚಿದೆ. ವಿಶೇಷವಾಗಿ ವಿವಾಹಗಳಿಗೆ ಸಂಬಂಧಿಸಿದಂತೆ. ಸಾಂಸ್ಕೃತಿಕವಾಗಿ ಶ್ರೀಮಂತ ಜನರು ಎಂದಿಗೂ ಒಪ್ಪಿಕೊಳ್ಳಲಾಗದ ಘಟನೆಗಳು ಮತ್ತೆ-ಮತ್ತೆ ವರದಿಯಾಗುತ್ತಿದೆ. ಕಣ್ಣೂರಿನಲ್ಲಿ ವಿವಾಹ ಸಮಾರಂಭವೊಂದರ ಮೇಲೆ ಬಾಂಬ್ ದಾಳಿ ನಡೆದಿದೆ. ಈ ಸಾವು ಅತ್ಯಂತ ದುರದೃಷ್ಟಕರ ಘಟನೆಗಳ ಮುಂದುವರಿಕೆಯಾಗಿದೆ.
ಕುಡಿತದ ಮತ್ತಿನಲ್ಲಿ ಜಗಳ, ಅಶ್ಲೀಲ ನೃತ್ಯ, ಸಮಾರಂಭಗಳಲ್ಲಿ ಅವಾಚ್ಯ ಶಬ್ಧಗಳ ಬಳಕೆ ಹೆಚ್ಚುತ್ತಿದೆ. ಪುರುಷರು ಮಹಿಳೆಯರಂತೆ ವೇಷಭೂಷಣಗಳನ್ನು ಧರಿಸುತ್ತಾರೆ ಮತ್ತು ಅಶ್ಲೀಲ ನೃತ್ಯಗಳನ್ನು ಮಾಡುತ್ತಾರೆ, ಮದುಮಗಳಿಗೆ ತಮ್ಮ ಚಪ್ಪಲಿಗಳಿಗೆ ಎಣ್ಣೆಯನ್ನು ಹಾಕಲು, ಅವರ ಕುತ್ತಿಗೆಗೆ ಚಪ್ಪಲಿಗಳನ್ನು ಹಾಕಲು, ಅವರ ಮಲಗುವ ಕೋಣೆಗಳನ್ನು ಅಸ್ತವ್ಯಸ್ತಗೊಳಿಸಲು ಮತ್ತು ಅವರ ಹಾಸಿಗೆಗಳನ್ನು ನೀರಿನಲ್ಲಿ ನೆನೆಸಲು ಆದೇಶಿಸುತ್ತಾರೆ.
ಇಂತಹ ಅಸಹ್ಯ ಕ್ರಮಗಳನ್ನು ಸಮಾಜ ಕಾಣದಂತೆ ಮೌನವಾಗಿರುವುದು ಅಪಾಯಕಾರಿ. ಅಂತಹವರ ವಿರುದ್ಧ, ಸ್ವಂತ ಮಕ್ಕಳು, ಸಂಬಂಧಿಕರು ಅಥವಾ ಸ್ನೇಹಿತರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಪಕ್ಷ ರಾಜಕಾರಣದ ಹೊರತಾಗಿ ಯುವ ಸಂಘಟನೆಗಳು, ಮಹಿಳಾ ಸಂಘಟನೆಗಳು ಸ್ಪಂದಿಸಲು ಮುಂದಾಗಬೇಕು. ಇಂತಹ ದೌರ್ಜನ್ಯಗಳನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ನಮ್ಮ ರಾಜ್ಯದ ಘನತೆ, ಸಹಬಾಳ್ವೆ ಮತ್ತು ಪ್ರೀತಿಯನ್ನು ಹಾಳುಮಾಡುವ ಚಟುವಟಿಕೆಗಳನ್ನು ಕೊನೆಗೊಳಿಸಲು ಆದಷ್ಟು ಬೇಗ ಒಂದಾಗಬೇಕು ಎಂದು ಬರೆದಿದ್ದಾರೆ.