ಕಾಸರಗೋಡು: ದೇಶೀಯ ಅಧ್ಯಾಪಕ ಪರಿಷತ್ತಿನ ಕಾಸರಗೋಡು ಜಿಲ್ಲಾ ಸಮ್ಮೇಳನವನ್ನು ಪ್ರತಿನಿಧಿ ಸಮ್ಮೇಳನವಾಗಿ ನಡೆಸಲಾಯಿತು. ಕಾಸರಗೋಡು `ಅಭಯ'ದಲ್ಲಿ ನಡೆದ ಸಮಾವೇಶವನ್ನು ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಉದ್ಘಾಟಿಸಿದರು. ಎನ್‍ಟಿಯು ಜಿಲ್ಲಾಧ್ಯಕ್ಷ ರಂಜಿತ್ ಯಂ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ವೆಂಕಪ್ಪ ಶೆಟ್ಟಿ, ರಾಜ್ಯ ಕಾರ್ಯದರ್ಶಿ ಕೆ.ಪ್ರಭಾಕರ ನಾಯರ್, ರಾಜ್ಯ ಸಮಿತಿ ಸದಸ್ಯ ರಾಜೀವ್ ಮಾಸ್ತರ್ ಮುಂತಾದವರು ಮಾತನಾಡಿದರು. ಮಹಾಬಲ ಭಟ್ ಸ್ವಾಗತಿಸಿ, ಅರವಿಂದಾಕ್ಷ ಭಂಡಾರಿ ವಂದಿಸಿದರು.
ನಂತರ ನಡೆದ ಸಂಘಟನಾ ಚರ್ಚೆಯ ಅಧ್ಯಕ್ಷತೆಯನ್ನು ದಾಮೋದರನ್ ಮಾಸ್ತರ್ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಕೆ.ಪ್ರಭಾಕರ ನಾಯರ್ ಚರ್ಚೆಗೆ ನೇತೃತ್ವನೀಡಿದರು. ಮಹಿಳಾ ವಿಭಾಗ ಸಂಚಾಲಕಿ ಸುಚಿತಾ ಟೀಚರ್, ಕೃಷ್ಣನ್ ಮಾಸ್ತರ್, ಮಹಾಬಲ ಮಾಸ್ತರ್, ಸತೀಶನ್ ಮಾಸ್ತರ್ ಭಾಗವಹಿಸಿದ್ದರು.
ನಂತರ ಶರತ್ ಕುಮಾರ್ ವಾರ್ಷಿಕ ವರದಿ ಮಂಡಿಸಿದರು. ಮಹಾಬಲ ಭಟ್ ಲೆಕ್ಕಪತ್ರ ಮಂಡಿಸಿದರು. ಕೃಷ್ಣನ್ ಮಾಸ್ತರ್ ಸ್ವಾಗತಿಸಿ, ಪ್ರದೀಪ್ ಕೆ.ವಿ ವಂದಿಸಿದರು. ನೂತನ ಅಧ್ಯಕ್ಷರಾಗಿ ರಂಜಿತ್ ಯಂ ಕಾರ್ಯದರ್ಶಿಯಾಗಿ ಅಜಿತ್ ಕುಮಾರ್ ಶೆಟ್ಟಿ, ಕೋಶಾಕಾರಿಯಾಗಿ ಮಹಾಬಲ ಭಟ್ ಆ0iÉ್ಕುಯಾದರು.