HEALTH TIPS

ಪ್ಯಾಂಗಾಂಗ್ ಸರೋವರಕ್ಕೆ ಅಡ್ಡಲಾಗಿ ಚೀನಾ ನಿರ್ಮಿಸುತ್ತಿರುವ ಸೇತುವೆ "ಅಕ್ರಮ ಒತ್ತುವರಿ": ಭಾರತ

             ನವದೆಹಲಿ: ಉತ್ತರ ಮತ್ತು ದಕ್ಷಿಣದ ದಡಗಳನ್ನು ಜೋಡಿಸಲು ಚೀನಾ ಪಾಂಗಾಂಗ್ ಸರೋವರಕ್ಕೆ ಅಡ್ಡಲಾಗಿ ಸೇತುವೆ ನಿರ್ಮಿಸುತ್ತಿರುವ ಪ್ರದೇಶ ಅಕ್ರಮವಾಗಿ ಆಕ್ರಮಿಸಿಕೊಂಡ ಪ್ರದೇಶದಲ್ಲಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸಂಸತ್ತಿಗೆ ತಿಳಿಸಿದೆ.

            ಪಾಂಗಾಂಗ್ ಸರೋವರಕ್ಕೆ ಅಡ್ಡಲಾಗಿ ಚೀನಾ ನಿರ್ಮಿಸುತ್ತಿರುವ ಸೇತುವೆಯನ್ನು ಸರ್ಕಾರ ಗಮನಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ ವಿ ಮುರಳೀಧರನ್ ಅವರು ಹೇಳಿದ್ದಾರೆ.

              "ಈ ಸೇತುವೆಯನ್ನು 1962 ರಿಂದ ಚೀನಾ ಅಕ್ರಮ ವಶಪಡಿಸಿಕೊಂಡಿರುವ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ. ಸರ್ಕಾರ ಈ ಅಕ್ರಮ ಒತ್ತುವರಿಯನ್ನು ಎಂದಿಗೂ ಒಪ್ಪಿಕೊಂಡಿಲ್ಲ" ಎಂದು ಸಚಿವರು ಉತ್ತರಿಸಿದ್ದಾರೆ.

                ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿವೆ. ಇತರ ದೇಶಗಳು ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಸಚಿವರು ಹೇಳಿದ್ದಾರೆ.

              8 ಮೀಟರ್ ಅಗಲವಿರುವ ಈ ಸೇತುವೆಯು ಪ್ಯಾಂಗೊಂಗ್‌ ಸರೋವರಕ್ಕೆ ಉತ್ತರ ಭಾಗದ ದಡದ ಚೀನಾದ ಸೇನಾ ನೆಲೆಯ ದಕ್ಷಿಣಕ್ಕೆ ಇದೆ. 2020 ರಲ್ಲಿ ಭಾರತ ಮತ್ತು ಚೀನೀ ಸೈನಿಕರ ನಡುವಿನ ಘರ್ಷಣೆಯ ಸಮಯದಲ್ಲಿ ಇಲ್ಲಿ ಚೀನಾದ ಆಸ್ಪತ್ರೆಗಳು ಮತ್ತು ಸೈನಿಕ ವಸತಿಗಳು ಇದ್ದವು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries