ನವದೆಹಲಿ: ನಿರಂತರ ಆರ್ಥಿಕ ಚೇತರಿಕೆಯನ್ನು ಸರ್ಕಾರ ಬಯಸುತ್ತದೆ ಮತ್ತು ಮೂಲಸೌಕರ್ಯ ನಿರ್ಮಾಣದ ಬಜೆಟ್ ಪ್ರಸ್ತಾವನೆಗಳು ಆರ್ಥಿಕತೆಗೆ ನೆರವಾಗಲು ಬಹು ಪರಿಣಾಮಕತ್ವ ರಚನೆಯ ಪ್ರಯತ್ನವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದ್ದಾರೆ.
ದೇಶದ ಹಣಕಾಸು ರಾಜಧಾನಿಯಲ್ಲಿ ಉದ್ಯಮದೊಂದಿಗಿನ ಬಜೆಟ್ ನಂತರದ ಸಂವಾದದಲ್ಲಿ ಮಾತನಾಡಿದ ಸೀತಾರಾಮನ್, ಸಾಂಕ್ರಾಮಿಕ ರೋಗದ ಪ್ರಭಾವದಿಂದ ಆರ್ಥಿಕತೆಯು ಹೊರಬರುತ್ತಿರುವ ಸಮಯದಲ್ಲಿ ಬಜೆಟ್ ಅನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ನಿರಂತರ ಚೇತರಿಕೆಯನ್ನು ನಾವು ಬಯಸುತ್ತೇವೆ. ಸುಸ್ಥಿರ ಸಂದೇಶ ಮತ್ತು ಊಹಿಸಬಹುದಾದ ತೆರಿಗೆ ಕಟ್ಟುಪಾಡುಗಳ ಆದ್ಯತೆಯೊಂದಿಗೆ ಆರ್ಥಿಕ ಬೆಳವಣಿಗೆ ಗುರಿಯನ್ನು ಬಜೆಟ್ ಹೊಂದಿದೆ ಎಂದರು.
ಸಾಂಕ್ರಾಮಿಕ ಸಮಯದಲ್ಲಿ ಜನರಿಗೆ ಪಾವತಿಗಳನ್ನು ಮಾಡಲು ತಂತ್ರಜ್ಞಾನವು ಸರ್ಕಾರಕ್ಕೆ ಸಹಾಯ ಮಾಡಿದೆ ಎಂದು ಹೇಳಿದ ಸೀತಾರಾಮನ್, ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳಲ್ಲಿ ಡಿಜಿಟಲ್ ಪರಿಹಾರಗಳನ್ನು ಹೇಗೆ ನಿಯೋಜಿಸಬಹುದು ಎಂಬುದನ್ನು ಸಹ ನೋಡುತ್ತಿದೆ ಎಂದು ಹೇಳಿದರು.
ಸರ್ಕಾರ ನಾವೀನ್ಯತೆ ಕಡೆಗೆ ಹೋಗ ಬಯಸುತ್ತದೆ ಮತ್ತು ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸಲು ಸಹಾಯ ಮುಂದುವರೆಯುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.