ಕಾಸರಗೋಡು: ಗಡಿನಾಡು ಕಾಸರಗೋಡಿನ ಹಿರಿಯ ಕನ್ನಡ ಹೋರಾಟಗಾರ, ಸಾಹಿತಿ, ಭಾಷಾಂತರಕಾರ ಎ.ನರಸಿಂಹ ಭಟ್ (91) ಇಂದು ಕಾಸರಗೋಡಿನ ಸ್ವಗೃಹದಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು.
ಎ. ನರಸಿಂಹ ಭಟ್, ನಿವೃತ್ತ ಹೈಸ್ಕೂಲು ಮುಖ್ಯೋಪಾಧ್ಯಾಯರಾಗಿದ್ದು ಕೋಟಕಣಿಯಲ್ಲಿ ವಾಸವಿದ್ದರು.
ಡಿವಿಜಿಯವರ ಮಂಕುತಿಮ್ಮನ ಕಗ್ಗ, ಮರುಳಮುನಿಯನ ಕಗ್ಗ ಮತ್ತು ಗೋವಿಂದಪೈಯವರ ಗೊಲ್ಗೊಥಾ ಮತ್ತು ವೈಶಾಖಿ ಕಾವ್ಯಕೃತಿಗಳನ್ನು ಇಂಗ್ಲಿಷಿಗೆ ಸೊಗಸಾಗಿ ಅನುವಾದಿಸಿರುವರು. ಅಲ್ಲದೆ ದೇವಮಾನವ ಯೇಸು, ಮಿರ್ದಾನನ ಮಂತ್ರಪುಸ್ತಕ, ದೇವಪ್ರವಾದಿ ಹಾಗೂ ಪಥರಹಿತ ಪಥ ಎಂಬ ಅನುವಾದ ಕೃತಿಗಳನ್ನು ಹೊರತಂದಿದ್ದಾರೆ. ಫೂಟ್ಸ್ ಅಂಡ್ ನಟ್ಸ್ ಎಂಬ ಶೀರ್ಷಿಕೆಯಲ್ಲಿ ನೂರಹದಿನೈದು ಶ್ರೇಷ್ಠ ಕವಿತೆಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ಎನ್.ಎಸ್.ಎಲ್. ಅವರ ನೂರು ಭಾವಗೀತೆಗಳನ್ನು Singing Sentiments ಎಂಬ ಹೆಸರಿನಲ್ಲಿ ಇಂಗ್ಲಿಷಿಗೆ ಅನುವಾದಿಸಿದ್ದಾರೆ.
ಕರ್ನಾಟಕ ಸರ್ಕಾರದ ಕಳೆದ ಸಾಲಿನ(2020)ಕುವೆಂಪು ಭಾಷಾ ಭಾರತಿ ಪ್ರಶಸ್ತಿ ನರಸಿಂಹ ಭಟ್ಟರ ಪಾಲಿಗೆ ಒದಗಿಬಂದಿತ್ತು.
ಉದ್ಯೋಗ : ಜೂನ್ 1954ರಿಂದ ಸಹಾಯಕ ಹೈಸ್ಕೂಲು ಅಧ್ಯಾಪಕ ಸೈಂಟ್ ಜೋಸೆಫ್ ಹೈಸ್ಕೂಲು ಬಜಪೆ, ಮುನಿಸಿಪಲ್ ಹೈಸ್ಕೂಲು ಹೊಸಪೇಟೆ, ಸೈಂಟ್ ಮೈಕಲ್ಸ್ ಹೈಸ್ಕೂಲು ಮಡಿಕೇರಿ, ಗವರ್ನ್‌ಮೆಂಟ್ ಹೈಸ್ಕೂಲು ಕಾಸರಗೋಡು (ಅಂದಿನ ಬೋರ್ಡ್ ಹೈಸ್ಕೂಲು), ಕಾಸರಗೋಡಿನಲ್ಲಿ ಸಹಾಯಕ ಅಧ್ಯಾಪಕನಾಗಿದ್ದಾಗ ಶಾಲಾ ಅಧ್ಯಾಪಕ ಸಂಘದ ಕಾರ್ಯದರ್ಶಿ (1956-1966), ಮಲಬಾರ್ ಟೀಚರ್, ಗಿಲ್ಲಿನ ಕಾರ್ಯಕಾರಿ ಸಮಿತಿ ಸದಸ್ಯ ಡಿಪಾರ್ಟ್‌ಮೆಂಟ್ ಗ್ರಾಜುಯೇಟ್ ಟೀಚರ್ ಎಸೋಸಿಯೇಶನ್‌ನ ಕಾಸರಗೋಡು ಜಿಲ್ಲಾಧ್ಯಕ್ಷ, ಜೂನಿಯರ್ ಡಿವಿಶನ್, ಎನ್.ಸಿ.ಸಿ. ಆಫೀಸರ್ (1957-1966), ಉಪಜಿಲ್ಲಾ ವಿದ್ಯಾಧಿಕಾರಿ (ಕುಂಬಳೆ, ಬೇಕಲ) 1966-1968.
ಹೈಸ್ಕೂಲು ಮುಖ್ಯೋಪಾಧ್ಯಾಯ :ಮೇ 1970ರಿಂದ ಮಾರ್ಚ್ 1, 100 ಗವರ್ನಮೆಂಟ್ ಹೈಸ್ಕೂಲು ಅಡೂರು, ಬೇಸಿಕ್ ಟ್ರೈನಿಂಗ್ ಶಾಲೆ ಮಾಯಿಪ್ಪಾಡಿ, ಗವರ್ನಮೆಂಟ್ ಹೈಸ್ಕೂಲು ಕುಂಬಳೆ, ಗವರ್ನ್‌ಮೆಂಟ್ ಹೈಸ್ಕೂಲು ರ್ ಗರ್ಲ್ಸ್ ಕಾಸರಗೋಡು, ಈ ಅವಧಿಯಲ್ಲಿ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಯಾಗಿಯೂ, ಜಿಲ್ಲಾ ವಿದ್ಯಾಭ್ಯಾಸ ಆಫೀಸದರ ಪರ್ಸನಲ್ ಅಸಿಸ್ಟೆಂಟ್ ಆಗಿಯೂ ಕರ್ತವ್ಯ ನಿರ್ವಹಣೆ ಮಾಡಿದ್ದರು.
ಉದ್ಯೋಗಾವಧಿಯಲ್ಲಿ ಕಾಸರಗೋಡು ಜಿಲ್ಲಾ ಹೈಸ್ಕೂಲು ಮುಖ್ಯೋಪಾಧ್ಯಾಯರ ಫೋರಮ್ ಕಾರ್ಯದರ್ಶಿ, ಜಿಲ್ಲಾ ಭಾರತ್ ಸೈಟ್ಸ್ ಕಮಿಶನರ್, ಎಸ್.ಎಸ್.ಎಲ್.ಸಿ, ಪರೀಕ್ಷಾ ಬೋರ್ಡಿನ ಸದಸ್ಯ, ಪಠ್ಯ ಪುಸ್ತಕ (ಕನ್ನಡ ಮತ್ತು ಸಮಾಜ ವಿಜ್ಞಾನ) ರಚನಾ ಸಮಿತಿ ಸದಸ್ಯ (1973 1987).
ಉದ್ಯೋಗಾವಧಿಯಲ್ಲಿ ಪಾಠ ಪ್ರವಚನಗಳೊಂದಿಗೆ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಿಗೆ, ಸಾಹಿತ್ಯಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ, ಮುಖ್ಯೋಪಾಧ್ಯಾಯನಾಗಿ ದುಡಿದ ಕಾಲಾವಧಿಯಲ್ಲಿ ಆ ಶಾಲೆಗಳ ಮೂಲ ಸೌಕರ್ಯಗಳ ಒದಗಣೆಗೆ ಪ್ರಾಮಾಣಿಕ ಪ್ರಯತ್ನ (ಪೀಠೋಪಕರಣ, ಕುಡಿಯುವ ನೀರು, ಆಟದ ಬಯಲು, ಆವರಣ ಗೋಡೆ, ವಿದ್ಯುತ್ ಸೌಕರ್ಯ ಇತ್ಯಾದಿ), (ಆ ಕಾಲದಲ್ಲಿ ಸಿಬ್ಬಂದಿಯ ಸಂಬಳ ಹೊರತು ಇತರ ಉದ್ದೇಶಗಳಿಗೆ ಅನುದಾನದ ಆಭಾವವಿತ್ತು. ಶಾಸಕ, ಸಂಸದ ನಿಧಿಗಳಿಂದಲೂ ಇಂದಿನಂತೆ ಯಾವ ಸಹಾಯವೂ ಇರಲಿಲ್ಲ.
ನಿವೃತ್ತಿಯ ಅನಂತರ : ನಿವೃತ್ತಿ 31-03-1987 ಇಳಿಹೊತ್ತು. 1987-88 ಸುಮಾರು ರೂ. 7000/- ಸಂಗ್ರಹಿಸಿ ಶಾಲಾ ಶಿಕ್ಷಕ ರಕ್ತಕ ಸಂಘಕ್ಕೆ ಕೊಡಲಾಯಿತು,
1987 – ಆಗಸ್ಟ್ ಸೆಪ್ಟೆಂಬರ ತಿಂಗಳಲ್ಲಿ ಸ್ಥಳೀಯ ಬಿ.ಇ.ಎಂ. ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಗೌರವ ಇಂಗ್ಲಿಷ್ ಪಾಠ ಬೋಧಕರಾಗಿ ಸೇವೆ ಸಲ್ಲಿಸಿದ್ದರು.
1988 ಜನವರಿಯಿಂದ ಮಾರ್ಚ್ ತಿಂಗಳ ತನಕ ಸ್ಥಳೀಯ ಚಿನ್ಮಯ ಮಿಶನಿನಲ್ಲಿ ಸಾಂದೀಪನಿ ಸಾಧನಾಲಯದ ಉದ್ಘಾಟನೋತ್ಸವ ಸಂದರ್ಭದಲ್ಲಿ ಕಾರ್ಯಾಲಯದಲ್ಲಿ ಗೌರವ ಕಾರ್ಯದರ್ಶಿಯಾಗಿದ್ದರು.
ವಿಶೇಷವೆಂಬಂತೆ ಸಮರಸಸುದ್ದಿಯ ಸಂವಾದದಲ್ಲಿ ಸಂದರ್ಶನ ನೀಡುವ ಮೂಲಕ ಕಳೆದ ವರ್ಷ ತಮ್ಮ ಸಾಹಿತ್ಯ, ಕನ್ನಡ ಹೋರಾಟದ ಹೂರಣ ತೆರೆದಿರಿಸಿದ್ದರು.