ಕಾಸರಗೋಡು: ಇಂಡಿಯನ್ ಮೆಡಿಕಲ್ ಅಸೋಸಿಯೇಶನ್(ಐಎಂಎ)ಕಾಸರಗೋಡು ಜಿಲ್ಲಾ ಘಟಕದ ಸುವರ್ಣ ಮಹೋತ್ಸವದ ಅಂಗವಾಗಿ ಪದ್ಮಶ್ರೀ ಪುರಸ್ಕøತ ಅಮೈ ಮಹಾಲಿಂಗ ನಾಯ್ಕ್ ಅವರನ್ನು ಅವರ ನಿವಾಸದಲ್ಲಿ ಅಭಿನಂದಿಸಲಾಯಿತು.
ಐಎಂಎ ಜಿಲ್ಲಾ ಘಟಕ ಅಧ್ಯಕ್ಷ ಬಿ.ನಾರಾಯಣ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಅಮೈ ಮಹಾಳಿಂಗ ನಾಯ್ಕ್ ದಂಪತಿಯನ್ನು ಶಾಲುಹೊದಿಸಿ, ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭ ಸಂಘಟನೆ ವತಿಯಿಂದ ತೆಂಗಿನಮರವೇರುವ ಸಲಕರಣೆ, ಔಷಧ ಸಿಂಪಡಣಾ ಸ್ಪ್ರೇಯರ್, ಹಾರೆ ಮುಂತಾದ ಕೃಷಿ ಸಲಕರಣೆಗಳನ್ನು ಕೊಡುಗೆಯಾಗಿ ನೀಡಲಾಯಿತು. ಗುಡ್ಡದ ಮೇಲಿನ ತನ್ನ ಸುಮಾರು ಎರಡುವರೆ ಎಕರೆ ಜಮೀನಿನಲ್ಲಿ ಅವಿರತ ಪ್ರಯತ್ನದ ಮೂಲಕ ಸುರಂಗ ಕೊರೆದು ನೀರಿನ ಮೂಲ ಕಂಡುಕೊಳ್ಳುವುದರ ಜತೆಗೆ ಈ ಜಾಗವನ್ನು ಸಮೃದ್ಧ ಕೃಷಿಭೂಮಿಯಾಗಿ ಪರಿವರ್ತಿಸಿದ ಯಶೋಗಾಥೆಯನ್ನು ವೈದ್ಯರ ತಂಡಕ್ಕೆ ಮಹಾಲಿಂಗ ನಾಯ್ಕ್ ಮನವರಿಕೆ ಮಾಡಿದರು.
ಈ ಸಂದರ್ಭ ಸುವರ್ಣಮಹೋತ್ಸವ ಸಮಿತಿ ಕನ್ವೀನರ್ ಡಾ. ಜನಾರ್ದನ ನಾಯ್ಕ್, ಡಾ. ಕೃಷ್ಣ ನಾಯ್ಕ್, ಡಾ. ಜ್ಯೋತಿ ಎಸ್. ಉಪಸ್ಥಿತರಿದ್ದರು.