ಕಾಸರಗೋಡು: ವ್ಯಾಪಿಸುತ್ತಿರುವ ಕೋವಿಡ್ ಹಿನ್ನೆಲೆಯಲ್ಲಿ ಕಾಸರಗೋಡು ಮೂಲಕ ಹಾದು ಹೋಗುವ ನಾಲ್ಕು ರೈಲುಗಳನ್ನು ಇಲಾಖೆ ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ಇದರಿಂದ ಜಿಲ್ಲೆಯ ರೈಲು ಪ್ರಯಾಣಿಕರ ಸಮಸ್ಯೆ ಮತ್ತಷ್ಟು ಜಟಿಲಗೊಂಡಿದೆ.
ಕಣ್ಣೂರು-ಚೆರ್ವತ್ತೂರು, ಕೋಯಿಕ್ಕೋಡ್-ಕಣ್ಣೂರು, ಮಂಗಳೂರು-ಕೋಯಿಕ್ಕೋಡ್ ಹಾಗೂ ಚೆರ್ವತ್ತೂರ್-ಮಂಗಳೂರು ರೈಲುಗಳನ್ನು ಫೆ. 15ರ ವರೆಗೆ ರದ್ದುಪಡಿಸಲಾಗಿದೆ. ಈ ಹಿಂದೆ ಕೋವಿಡ್ ಹಿನ್ನೆಲೆಯಲ್ಲಿ ನಿಲುಗಡೆಗೊಂಡಿದ್ದ ರೈಲುಗಳನ್ನು ಇತ್ತೀಚೆಗಷ್ಟೆ ಪುನರಾರಂಭಿಸಲಾಗಿತ್ತು. ರೈಲು ಸಂಚಾರ ರದ್ದುಗೊಳಿಸಿರುವುದರಿಂದ ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವವರು, ರೋಗಿಗಳು ಸೇರಿದಂತೆ ನಿತ್ಯ ಸಂಚಾರದ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.