ಶ್ರೀನಗರ: ಜಮ್ಮುವಿನ ಸಾಂಬಾ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಮಾದಕವಸ್ತುಗಳ ಕಳ್ಳಸಾಗಣೆಗೆ ಯತ್ನಿಸುತ್ತಿದ್ದ ಮೂವರು ಪಾಕಿಸ್ತಾನ ಪ್ರಜೆಗಳನ್ನು ಬಿಎಸ್‌ಎಫ್ ಯೋಧರು ಭಾನುವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಶ್ರೀನಗರ: ಜಮ್ಮುವಿನ ಸಾಂಬಾ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಮಾದಕವಸ್ತುಗಳ ಕಳ್ಳಸಾಗಣೆಗೆ ಯತ್ನಿಸುತ್ತಿದ್ದ ಮೂವರು ಪಾಕಿಸ್ತಾನ ಪ್ರಜೆಗಳನ್ನು ಬಿಎಸ್‌ಎಫ್ ಯೋಧರು ಭಾನುವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
'ಮೃತರ ಬಳಿ ಇದ್ದ ₹ 180 ಕೋಟಿ ಮೌಲ್ಯದ, ಅಂದಾಜು 36 ಕೆ.ಜಿಯಷ್ಟು ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ.
'ಹತ್ಯೆ ಮಾಡಲಾಗಿರುವವರ ದೇಹಗಳನ್ನು ಇನ್ನೂ ವಶಪಡಿಸಿಕೊಳ್ಳಬೇಕಿದ್ದು, ಘಟನೆ ನಡೆದ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಈ ಕಾರ್ಯಾಚರಣೆಯೊಂದಿಗೆ ದೊಡ್ಡ ಪ್ರಮಾಣದ ಮಾದಕವಸ್ತು ಕಳ್ಳಸಾಗಣೆ ಯತ್ನವನ್ನು ವಿಫಲಗೊಳಿಸಿದಂತಾಗಿದೆ' ಎಂದೂ ಅವರು ತಿಳಿಸಿದ್ದಾರೆ.
'ಕಾಶ್ಮೀರಿ ಯುವಕರನ್ನು ಮಾದಕವಸ್ತುಗಳ ವ್ಯಸನಿಗಳನ್ನಾಗಿಸಲು ಪಾಕಿಸ್ತಾನ ಯತ್ನಿಸುತ್ತಿದೆ. ಇಷ್ಟು ವರ್ಷಗಳ ವರೆಗೆ ಪಂಜಾಬ್‌ನಲ್ಲಿ ಮಾಡಿದಂತಹ ಕೃತ್ಯಗಳನ್ನೇ ಕಾಶ್ಮೀರದಲ್ಲಿ ಮುಂದುವರಿಸಲು ಆ ದೇಶ ಯತ್ನಿಸುತ್ತಿದೆ' ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್‌ಬಾಗ್ ಸಿಂಗ್ ಅವರು ಕಳೆದ ವರ್ಷ ಹೇಳಿದ್ದರು.