ಮುಲ್ಲಪೆರಿಯಾರ್ ಅಣೆಕಟ್ಟು ಒಡೆದು ಹೋಗುತ್ತಿದೆ, ಕ್ರಮ ಕೈಗೊಂಡಿಲ್ಲ ಎಂಬ ಕಾರಣ ನೀಡಿ ಶಾಸಕರ ಕಾರನ್ನು ಪುಡಿಗಟ್ಟಿದ ಯುವಕ!
0samarasasudhiಫೆಬ್ರವರಿ 28, 2022
ತಿರುವನಂತಪುರ: ಶಾಸಕರ ಕಾರನ್ನು ಜಖಂಗೊಳಿಸಿದ ಘಟನೆ ನಡೆದಿದೆ.ಕೋವಳಂ ಶಾಸಕ ಎಂ ವಿನ್ಸೆಂಟ್ ವಾಹನ ಜಖಂಗೊಂಡಿದೆ.
ಮುಲ್ಲಪೆರಿಯಾರ್ ಅಣೆಕಟ್ಟು ಒಡೆದು ಹೋಗುತ್ತಿದ್ದು,ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಕೋಪದಿಂದ ಏಕಾಏಕಿ ಧಾವಿಸಿದ ಯುವಕನೊಬ್ಬ ಈ ಕೃತ್ಯ ನಡೆಸಿರುವುದಾಗಿ ತಿಳಿದುಬಂದಿದೆ.
ಮನೆ ಮುಂದೆ ವಾಹನ ನಿಲ್ಲಿಸಿರುವಲ್ಲಿಗೆ ಧಾವಿಸಿ ಯುವಕ ಕೃತ್ಯವೆಸಗಿದ್ದು, ಸ್ಥಳೀಯರು ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆತ ಮಾನಸಿಕ ಅಸ್ವಸ್ಥ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಬಾಲರಾಮಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.