ಬದಿಯಡ್ಕ: ದಶಕದ ಹಿಂದೆ ಗಡಿನಾಡು ಕಾಸರಗೋಡಿನಲ್ಲಿ ಹುಟ್ಟಿಕೊಂಡು ಸಾಹಿತ್ಯ, ಸಾಂಸ್ಕøತಿಕ ವಲಯದಲ್ಲಿ ಗುರುತಿಸಲ್ಪಟ್ಟ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯು ರಂಗ ಕಹಳೆ (ಸಾಧನೆಯ ಬೆನ್ನೇರಿ ರಂಗಸಿರಿ ಪಯಣ..) ಎಂಬ ಕಾರ್ಯಕ್ರಮ ಸರಣಿಗೆ ಸಜ್ಜಾಗಿದೆ. ಅಭಿಯಾನದ ಉದ್ಘಾಟನೆ ಹಾಗೂ ಸಾಧಕ ಸಮ್ಮಾನವು ಇಂದು ಅಪರಾಹ್ನ 3 ಕ್ಕೆ ಸಾರಡ್ಕದ ಆರಾಧನಾ ಕಲಾಭವನದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಸಾಧಕ, ಸುರಂಗ ಭಗೀರಥ ಪದ್ಮಶ್ರೀ ಮಹಾಲಿಂಗ ನಾಯ್ಕ್ ಅಮೈ ಅವರನ್ನು ಸನ್ಮಾನಿಸಲಾಗುವುದು.
ರಂಗಸಿರಿಯ ಅಧ್ಯಕ್ಷೆ ಪ್ರಭಾವತಿ ಕೆದಿಲಾಯ ಪುಂಡೂರು ಅಧ್ಯಕ್ಷತೆವಹಿಸುವರು. ಕಾರ್ಯಕ್ರಮಕ್ಕೆ ಕವಯಿತ್ರಿ ಅನ್ನಪೂರ್ಣ ಬೆಜಪ್ಪೆ ಅತಿಥಿಯಾಗಿ ಶುಭಹಾರೈಸುವರು. ಬಳಿಕ ರಂಗಸಿಯ ಸಂಗೀತ ವಿಭಾಗದ ಶಿಕ್ಷಕಿಯರಾದ ಡಾ.ಸ್ನೇಹಾ ಪ್ರಕಾಶ್ ಪೆರ್ಮುಖ ಹಾಗೂ ಸಂಗೀತ ವಿದುಷಿ ಗೀತಾ ಸಾರಡ್ಕ ಅವರ ರಂಗಸಿರಿ ವಿದ್ಯಾರ್ಥಿಗಳಿಂದ ಗಾಯನ ಕಾರ್ಯಕ್ರಮವು ನಡೆಯಲಿದೆ.