ಬದಿಯಡ್ಕ: ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ಶನಿವಾರ ಕನ್ನೆಪ್ಪಾಡಿ ಆಶ್ರಯ ಆಶ್ರಮಕ್ಕೆ ಭೇಟಿ ನೀಡಿದರು. ಆಶ್ರಮವಾಸಿಗಳನ್ನು ಪ್ರೀತಿಯಿಂದ ಮಾತನಾಡಿಸಿದ ಶಾಸಕರು ಸಂಸ್ಥಾಪಕಿ ಶಾರದಾ ಅಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಗೋವುಗಳಿಗೆ ಗೋಗ್ರಾಸವನ್ನು ನೀಡಿದರು.
ಬ್ಲಾಕ್ ಪಂಚಾಯಿತಿ ಸದಸ್ಯರುಗಳಾದ ಜಯಂತಿ ಕುಂಟಿಕಾನ, ಅಶ್ವಿನಿ ನೀರ್ಚಾಲು, ಆಶ್ರಮದ ಪ್ರಮುಖರಾದ ಗಣೇಶಕೃಷ್ಣ ಅಳಕ್ಕೆ, ಮಹೇಶ್ ವಳಕ್ಕುಂಜ, ರಾಜೇಶ್ ಮಾಸ್ತರ್ ಅಗಲ್ಪಾಡಿ, ರಮೇಶ್ ಕಳೇರಿ ಈ ಸಂದರ್ಭದಲ್ಲಿ ಜೊತೆಗಿದ್ದರು.