HEALTH TIPS

ಸಾಧಾರಣ ಪ್ರತಿಭೆಯುಳ್ಳವರ ನೇಮಕದಿಂದ ಯುವಕರ ಭವಿಷ್ಯ ಹಾಳು: ವರುಣ್ ಗಾಂಧಿ

          ನವದೆಹಲಿ: ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ನೂತನ ಕುಲಪತಿಯಾಗಿ ಶಾಂತಿಶ್ರೀ ಧೂಲಿಪುಡಿ ಪಂಡಿತ್‌ ಅವರನ್ನು ನೇಮಕ ಮಾಡಿರುವುದನ್ನು ಬಿಜೆಪಿ ಸಂಸದ ವರುಣ್‌ ಗಾಂಧಿ ಟೀಕಿಸಿದ್ದಾರೆ.

           'ಸಾಧಾರಣ ಯೋಗ್ಯತೆ ಉಳ್ಳವರನ್ನು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೇಮಕ ಮಾಡುವುದರಿಂದ ನಮ್ಮ ಮಾನವ ಸಂಪನ್ಮೂಲ ಹಾಗೂ ಯುವಕರ ಭವಿಷ್ಯ ಹಾಳಾಗುತ್ತದೆ' ಎಂದು ಅವರು ಟ್ವೀಟ್‌ ಮಾಡಿದ್ದಾರೆ.

          ತಮ್ಮನ್ನು ಜೆಎನ್‌ಯು ಕುಲಪತಿಯನ್ನಾಗಿ ನೇಮಕ ಮಾಡಿದ ನಂತರ ಶಾಂತಿಶ್ರೀ ಅವರು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯನ್ನು ತಮ್ಮ ಟ್ವೀಟ್‌ನಲ್ಲಿ ಹಂಚಿಕೊಂಡಿರುವ ವರುಣ್‌ ಗಾಂಧಿ, ಆ ಪ್ರಕಟಣೆಯಲ್ಲಿನ ವ್ಯಾಕರಣಕ್ಕೆ ಸಂಬಂಧಿಸಿದ ದೋಷಗಳನ್ನು ಉಲ್ಲೇಖಿಸಿದ್ದಾರೆ.

         ಜಾಗತಿಕ ಗುಣಮಟ್ಟ ಹೊಂದಿರುವ ದೇಶದ ಕೆಲವೇ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೂಕ್ತರಾದವರನ್ನು ನೇಮಕ ಮಾಡಬೇಕು. ಅವರು ಈ ಸಂಸ್ಥೆಗಳನ್ನು ಸಮರ್ಥವಾಗಿ ಮುನ್ನಡೆಸುವವರಾಗಿರಬೇಕು. ದೂರದೃಷ್ಟಿ ಇಲ್ಲದವರು, ಕಡಿಮೆ ಸಂವಹನ ಸಾಮರ್ಥ್ಯ ಅಥವಾ ಅರ್ಹತೆವುಳ್ಳವರ ನೇಮಕ ಶೈಕ್ಷಣಿಕ ಕ್ಷೇತ್ರದ ಮೇಲೆ ದೂರಗಾಮಿ ಪರಿಣಾಮ ಬೀರುತ್ತದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.



ಜೆಎನ್‌ಯು ಕುಲಪತಿಯಾಗಿ ನೇಮಕಗೊಂಡಿರುವ 59 ವರ್ಷದ ಶಾಂತಿಶ್ರೀ ಪಂಡಿತ್‌ ಅವರು, ಇದೇ ವಿ.ವಿ. ಮಾಜಿ ವಿದ್ಯಾರ್ಥಿಯೂ ಆಗಿದ್ದಾರೆ. ಅವರು 'ಅಂತರರಾಷ್ಟ್ರೀಯ ಸಂಬಂಧಗಳು' ವಿಷಯದ ಮೇಲೆ ಎಂ.ಫಿಲ್‌ ಹಾಗೂ ಪಿಎಚ್‌.ಡಿ ಪದವಿ ಪಡೆದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries