ಬದಿಯಡ್ಕ: ಜನಸಂಘ ಸ್ಥಾಪಕ ಪಂಡಿತ್ ದೀನದಯಾಲ್ ಉಪಾಧ್ಯಾಯ ಹಾಗೂ ವಕೀಲ ರಂಜಿತ್ ಶ್ರೀನಿವಾಸನ್ ಸಂಸ್ಮರಣೆ ಮತ್ತು ನಿಧಿ ಸಮರ್ಪಣೆ ಕಾರ್ಯಕ್ರಮವು ಫೆಬ್ರವರಿ 11ರಿಂದ 20ರ ತನಕ ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿ ವಿವಿಧ ಬೂತ್‍ಗಳ ಸಮ್ಮೇಳನದೊಂದಿಗೆ ನಡೆಯಿತು. ಬಿಜೆಪಿ ಬದಿಯಡ್ಕ ಮಂಡಲ ಬೂತ್ ನಂ. 49 ಕುಂಟಿಕಾನದಲ್ಲಿ ಬ್ಲಾಕ್ ಪಂಚಾಯಿತಿ ಸದಸ್ಯೆ ಜಯಂತಿ ಕುಂಟಿಕಾನ ಅವರ ನೇತೃತ್ವದಲ್ಲಿ ದಿ. ಅಣ್ಣಪ್ಪ ನಾಯ್ಕ ಕುಂಟಿಕಾನ ಇವರ ಮನೆಯಲ್ಲಿ ಜರಗಿತು. ಪಕ್ಷದ ಹಿರಿಯ ಕಾರ್ಯಕರ್ತ ಗೋಪಾಲ ಮಣಿಯಾಣಿ ಸರಳಿ, ಈಶ್ವರ ಚಂದ್ರ ಪ್ರಸಾದ ಕುಳಮರ್ವ, ಲಲಿತಾ ದೇವರಮೆಟ್ಟು, ಸುಂದರ ಕಟ್ನಡ್ಕ, ಶ್ಯಾಮಪ್ರಸಾದ ಸರಳಿ, ನಳಿನಾಕ್ಷನ್ ದೇವರಮೆಟ್ಟು ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡು ಪುಷ್ಪಾರ್ಚನೆಗೈದು ನಿಧಿಸಮರ್ಪಣೆ ಮಾಡಿದರು.