ನವದೆಹಲಿ: ಸ್ಟಾಕ್ ಮಾರ್ಕೆಟ್ ಹಸ್ತಕ್ಷೇಪ ಪ್ರಕರಣದಲ್ಲಿ ನಡೆದಿರುವ ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಸುಬ್ರಮಣಿಯನ್ ನನ್ನು ಸಿಬಿಐ ಗುರುವಾರ ತಡರಾತ್ರಿ ಬಂಧಿಸಿದೆ.
ನವದೆಹಲಿ: ಸ್ಟಾಕ್ ಮಾರ್ಕೆಟ್ ಹಸ್ತಕ್ಷೇಪ ಪ್ರಕರಣದಲ್ಲಿ ನಡೆದಿರುವ ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಸುಬ್ರಮಣಿಯನ್ ನನ್ನು ಸಿಬಿಐ ಗುರುವಾರ ತಡರಾತ್ರಿ ಬಂಧಿಸಿದೆ.
ಸೆಬಿ ವರದಿಯನ್ನು ಆಧರಿಸಿ ಈ ಬಂಧನವನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಸಿಬಿಐ ಆನಂದ್ ನನ್ನು ಬಂಧಿಸಲು ನಿರ್ಧರಿಸುವ ಮೊದಲು ಚೆನ್ನೈನಲ್ಲಿ ದಿನಗಳ ಕಾಲ ವಿಚಾರಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆನಂದ್ ಸುಬ್ರಮಣಿಯನ್ ಮೊದಲು 2013 ರಲ್ಲಿ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ ಎಸ್ ಇ) ನಲ್ಲಿ ಮುಖ್ಯ ಕಾರ್ಯತಂತ್ರದ ಸಲಹೆಗಾರರಾಗಿ ನೇಮಕಗೊಂಡರು ಹಾಗೂ ನಂತರ 2015 ರಲ್ಲಿ ಎಂಡಿ ಚಿತ್ರಾ ರಾಮಕೃಷ್ಣ ಅವರು ಎನ್ ಎಸ್ ಇ ಯ ಗ್ರೂಪ್ ಆಪರೇಟಿಂಗ್ ಆಫೀಸರ್ ಆಗಿ ಭಡ್ತಿ ನೀಡಿದರು.
ಹಿಮಾಲಯದಲ್ಲಿ ನೆಲೆಸಿರುಸುವ 'ಯೋಗಿ'ಯ ಪ್ರಭಾವದಿಂದಾಗಿ ಆನಂದ್ ಸುಬ್ರಮಣಿಯನ್ ಅವರ ನೇಮಕವಾಗಿದೆ ಎಂದು ಸಿಬಿಐ ತನ್ನ ತನಿಖೆಯಲ್ಲಿ ಕಂಡುಕೊಂಡಿದೆ.
2016 ರಲ್ಲಿ ಅಕ್ರಮಗಳ ಆರೋಪಗಳು ಬಂದ ನಂತರ ಅವರು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರವನ್ನು ಸುಬ್ರಮಣಿಯನ್ ತೊರೆದರು.