ಕಾಸರಗೋಡು: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಜಿಲ್ಲಾ ಘಟಕದ ಕಾರುಣ್ಯ ಯೋಜನೆಯಾದ ಟ್ರೇಡರ್ಸ್ ವೆಲ್‍ಫೇರ್ ಬೆನಿಫಿಟ್ ಸ್ಕೀಮಿನ ಮೂರನೇ ವಾರ್ಷಿಕ ಅಂಗವಾಗಿ ನಿರ್ಮಿಸಲಾಗುತ್ತಿರುವ ಕಿರು ಚಿತ್ರದ ಸ್ವಿಚ್‍ಆನ್ ಕಾರ್ಯಕ್ರಮವನ್ನು ಸಂಘಟನೆ ಜಿಲ್ಲಾಧ್ಯಕ್ಷ ಕೆ. ಅಹಮ್ಮದ್ ಶೆರೀಫ್ ನಿರ್ವಹಿಸಿದರು.
ಜಿಲ್ಲಾ ಕಾರ್ಯದರ್ಶಿ ಕೆ.ಜಿ ಸಜಿ, ಜಿಲ್ಲಾ ಕೋಶಾಧಿಕಾರಿ ಮಾಹಿನ್ ಕೋಲಿಕ್ಕರ, ಎ.ಎ ಆಸಿಫ್, ಗೋಪಿನಥಾನ್, ಟಿ.ಎ ಇಲ್ಯಾಸ್, ಎ.ಎ ಅಸೀಸ್ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ಯಾವುದೇ ಘಟಕದ ಸದಸ್ಯ ವ್ಯಾಪಾರಿಗೆ, ಪತಿ ಅಥವಾ ಪತ್ನಿಗೆ ಟ್ರೇಡರ್ಸ್ ವೆಲ್‍ಫೇರ್ ಬೆನಿಫಿಟ್ ಸ್ಕೀಮಿನ ಸದಸ್ಯತ್ವ ಲಭ್ಯವಾಗಲಿದೆ. ಯೋಜನೆಯನ್ವಯ ಸದಸ್ಯರೊಬ್ಬರು ಮೃತಪಟ್ಟಲ್ಲಿ ಆ ಸದಸ್ಯನ ಆಶ್ರಿತ ಕುಟುಂಬಕ್ಕೆ ಧನಸಹಾಯ ನೀಡುವ ವ್ಯವಸ್ಥೆಯಿರಲಿದೆ. ಜತೆಗೆ ಚಿಕಿತ್ಸಾ ಸಹಾಯವಾಗಿ 25ಸಾವಿರ ರೂ. ವರೆಗೆ ಧನಸಹಾಯ ಲಭಿಸಲಿದೆ. ಫೆ. 15ರಂದು ಕಾಸರಗೋಡು ನಗರಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಧನಸಹಾಯ ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.