ಪಾಲಕ್ಕಾಡ್: ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿರುವುದು ಪತ್ತೆಯಾಗಿದೆ. ಪಾಲಕ್ಕಾಡ್ ಮೆನನ್ ಪಾರದಲ್ಲಿ ಈ ಘಟನೆ ನಡೆದಿದೆ. ಸಕ್ಕರೆ ಕಾರ್ಖಾನೆ ಬಳಿ ನಿರ್ಮಿಸಿದ್ದ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ.
ಇಂದು ಬೆಳಗ್ಗೆ ಈ ಪ್ರದೇಶಕ್ಕೆ ಆಗಮಿಸಿದ ಜನರು ಮೂರ್ತಿ ಹಾನಿಗೊಂಡಿರುವುದು ಕಂಡು ಬಂದಿದೆ. ಗಾಂಧೀಜಿಯವರ ತಲೆ ಸಂಪೂರ್ಣ ಕಳಚಿ ಬಿದ್ದಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.