ಪೆರ್ಲ: ಎಣ್ಮಕಜೆ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಎಣ್ಮಕಜೆ ಗ್ರಾಮ ಪಂಚಾಯತು ಕುಟುಂಬಶ್ರೀ ಸಿಡಿಎಸ್ ನೂತನ ಅಧ್ಯಕ್ಷೆ ಹಾಗೂ ಸದಸ್ಯೆಯರನ್ನು ಅಭಿನಂದಿಸಲಾಯಿತು. ಅಧ್ಯಕ್ಷೆ ಜಲಜಾಕ್ಷಿ ಹಾಗೂ ಸದಸ್ಯೆಯರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಸಲ್ ಅಭಿನಂದಿಸಿದರು. ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಗಾಂಭೀರ್ ಅಧ್ಯಕ್ಷತೆವಹಿಸಿದ್ದರು. ಎಣ್ಮಕಜೆ ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್, ಅಬ್ದುಲ್ ರಹಿಮಾನ್,ಅಮು ಅಡ್ಕಸ್ಥಳ, ವಿಲ್ಫ್ರೆಡ್ ಡಿಸೋಜ, ರಸಾಕ್ ನಲ್ಕ, ಶಾರದ ವೈ, ಕುಸುಮಾವತಿ ಮೊದಲಾದವರು ಪಾಲ್ಗೊಂಡಿದ್ದರು.