ಸಾಮಾನ್ಯವಾಗಿ ಬೆಳಿಗ್ಗೆ ಇಡ್ಲಿ, ದೋಸೆ ಸವಿಯಲು ಜೊತೆಗೆ ಚಟ್ನಿ ಇರಲೇಬೇಕು, ಅಷ್ಟೇ ಅಲ್ಲ, ಮಧ್ಯಾಹ್ನದ ಬಿಸಿಬಿಸಿ ಗಂಜಿ ಊಟಕ್ಕೂ ಚಟ್ನಿ ಬೆಸ್ಟ್ ಸೈಡ್ ಡಿಶ್. ಆದರೆ ಪ್ರತಿದಿನ ಒಂದೇ ರೀತಿಯ ಚಟ್ನಿ ಯಾರಿಗಾದ್ರೂ ಬೇಜಾರು ತರದೇ ಇರದು. ದಿನಾಲೂ ಕಾಯಿ ಚಟ್ನಿ, ಶೇಂಗಾ ಚಟ್ನಿ ತಿಂದು ಬೋರಾಗಿದ್ರೆ ಈ ಸುಟ್ಟ ಈರುಳ್ಳಿ ಚಟ್ನಿ ಒಮ್ಮೆ ಪ್ರಯತ್ನಿಸಿ. ಸುಟ್ಟ ಬದನೆಕಾಯಿ ಚಟ್ನಿ ಎಷ್ಟು ರುಚಿಯಾಗಿರುತ್ತೋ ಅಷ್ಟೇ, ಟೇಸ್ಟ್ ಈ ಸುಟ್ಟ ಈರುಳ್ಳಿ ಬೆಳ್ಳುಳ್ಳಿ ಚಟ್ನಿ ಕೂಡ ನೀಡುತ್ತೆ. ಹಾಗಾದ್ರೆ ಇನ್ಯಾಕೆ ತಡ ಈ ರುಚಿಕರವಾದ ಚಟ್ನಿ ಮಾಡೋದು ಹೇಗೆ ನೋಡ್ಕೊಂಡು ಬರೋಣ.
ಈ ಸುಟ್ಟ ಈರುಳ್ಳಿ ಚಟ್ನಿ ಜೊತೆಗಿದ್ರೆ ಇಡ್ಲಿ- ದೋಸೆ ತುಸು ಹೆಚ್ಚೇ ಹೊಟ್ಟೆ ಸೇರುತ್ತೆ!
ಬೇಕಾಗುವ ಪದಾರ್ಥಗಳು : ಹುರಿಯಲು: 10 ಸಣ್ಣ ಈರುಳ್ಳಿ 1 ಸಣ್ಣ ಬೆಳ್ಳುಳ್ಳಿ 2 ಟೀಸ್ಪೂನ್ ಎಣ್ಣೆ 1 ಟೀಸ್ಪೂನ್ ಉದ್ದಿನ ಬೇಳೆ 1 ಚಮಚ ಕಡೆಲೆ ಬೇಳೆ 1 ಟೀಸ್ಪೂನ್ ಕೊತ್ತಂಬರಿ ಬೀಜ 4 ಒಣಗಮೆಣಸಿನಕಾಯಿ ಕರಿಬೇವಿನ ಎಲೆಗಳು ಸಣ್ಣ ತುಂಡು ಹುಣಸೆಹಣ್ಣು ½ ಟೀಸ್ಪೂನ್ ಉಪ್ಪು ¾ ಕಪ್ ನೀರು 1 ಟೀಸ್ಪೂನ್ ಸಾಸಿವೆ ಪಿಂಚ್ ಹಿಂಗ್ ¼ ಟೀಸ್ಪೂನ್ ಅರಿಶಿನ 1 ಟೀಸ್ಪೂನ್ ಮೆಣಸಿನ ಪುಡಿ
ತಯಾರಿಸುವ ವಿಧಾನ : ಮೊದಲನೆಯದಾಗಿ, ಗ್ಯಾಸ್ ಮೇಲೆ ಒಂದು ಜಾಲರಿ ಇಟ್ಟು, ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಚೆನ್ನಾಗಿ ಸುಟ್ಟುಕೊಳ್ಳಿ. ಈರುಳ್ಳಿ ಒಳಗಿನಿಂದ ಮೃದುವಾಗುವವರೆಗೆ ಚೆನ್ನಾಗಿ ಸುಡಿ. ಸುಟ್ಟ ಈರುಳ್ಳಿ ಬೆಳ್ಳುಳ್ಳಿ ತಣ್ಣಗಾದ ನಂತರ ಸಿಪ್ಪೆತೆಗೆದು, ಮಿಕ್ಸಿ ಜಾರಿಗೆ ಹಾಕಿ, ಬದಿಯಲ್ಲಿಡಿ. ಬಾಣಲಿಗೆ 2 ಟೀಸ್ಪೂನ್ ಎಣ್ಣೆಯನ್ನು ಹಾಕಿ ಬಿಸಿ ಮಾಡಿ, ಅದಕ್ಕೆ 1 ಚಮಚ ಉದ್ದಿನ ಬೇಳೆ, 1 ಚಮಚ ಕಡೆಲೆ ಬೇಳೆ, ಕೊತ್ತಂಬರಿ ಬೀಜ ಜೊತೆಗೆ, 4 ಒಮೆಣಸಿನಕಾಯಿ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಸೇರಿಸಿ, ಚೆನ್ನಾಗಿ ಹುರಿದು, ತಣ್ಣಗಾಗಿಸಿ ಅದೇ ಮಿಕ್ಸಿ ಜಾರಿಗೆ ಸೇರಿಸಿ, ಒಂದು ಸುತ್ತು ರುಬ್ಬಿಕೊಳ್ಳಿ. ಹೆಚ್ಚುವರಿಯಾಗಿ, ಒಂದು ಸಣ್ಣ ತುಂಡು ಹುಣಸೆಹಣ್ಣು, ½ ಟೀಸ್ಪೂನ್ ಉಪ್ಪು ಮತ್ತು ¾ ಕಪ್ ನೀರು ಸೇರಿಸಿ. ಅಗತ್ಯವಿದ್ದರೆ ನೀರನ್ನು ಸೇರಿಸಿ ನಯವಾದ ಪೇಸ್ಟ್ ಆಗಿ ರುಬ್ಬಿಕೊಳ್ಳಿ. ಈಗ ಒಗ್ಗರಣೆ ತಯಾರಿಸಲು, 2 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ 1 ಟೀಸ್ಪೂನ್ ಸಾಸಿವೆ, 1 ಟೀಸ್ಪೂನ್ ಉದ್ದಿನ ಬೇಳೆ, 1 ಒಣಮೆಣಸಿನಕಾಯಿ, ಕೆಲವು ಕರಿಬೇವಿನ ಎಲೆಗಳು ಮತ್ತು ಚಿಟಿಕೆ ಹಿಂಗನ್ನು ಹಾಕಿ, ಜೊತೆಗೆ, ¼ ಟೀಸ್ಪೂನ್ ಅರಿಶಿನ ಮತ್ತು 1 ಟೀಸ್ಪೂನ್ ಸೇರಿಸಿ ಒಂದು ನಿಮಿಷ ಬೇಯಿಸಿ. ಇದಕ್ಕೆ ತಯಾರಾದ ಈರುಳ್ಳಿ-ಬೆಳ್ಳುಳ್ಳಿ ಪೇಸ್ಟ್ ಸುರಿಯಿರಿ ಮತ್ತು ಎಣ್ಣೆ ಬೇರ್ಪಡುವವರೆಗೆ ಬೇಯಿಸಿ. ಮುಂದೆ, ½ ಕಪ್ ನೀರು ಸೇರಿಸಿ ಮತ್ತು ಅಗತ್ಯವಿರುವಂತೆ ಸ್ಥಿರತೆಯನ್ನು ತಯಾರಿಸಿ, ಚಟ್ನಿಯಿಂದ ಎಣ್ಣೆ ಬೇರ್ಪಡುವವರೆಗೆ ಬೇಯಿಸಿದ್ರೆ, ಸುಟ್ಟ ಈರುಳ್ಳಿ-ಬೆಳ್ಳುಳ್ಳಿ ಚಟ್ನಿ ಸವಿಯಲು ಸಿದ್ಧ.