ಬದಿಯಡ್ಕ: ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಅಭಿಯಾನದ ಅಂಗವಾಗಿ ಕುಂಬ್ಡಾಜೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾ¯ಗೆÉ ಮಂಜೂರು ಮಾಡಿದ ಕಟ್ಟಡವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನೆ ಆನ್‍ಲೈನ್‍ನಲ್ಲಿ ಉದ್ಘಾಟಿಸಿದರು.
ಸಾರ್ವಜನಿಕ ಶಾಲೆಗಳನ್ನು ಶ್ರೇಷ್ಠತೆಯ ಕೇಂದ್ರಗಳನ್ನಾಗಿ ಮಾಡುವ ಭಾಗವಾಗಿ ಶಾಲಾ ಕಟ್ಟಡ ನಿರ್ಮಾಣಕ್ಕೆ `1 ಕೋಟಿ ಮಂಜೂರಾಗಿದೆ. ದೇಶದ ಅಭಿವೃದ್ಧಿಯನ್ನು ಉತ್ತಮ ರೀತಿಯಲ್ಲಿ ಖಚಿತಪಡಿಸಿಕೊಳ್ಳುವುದು ಒಂದು ಪ್ರಮುಖ ಕಾರ್ಯವೆಂದು ಸರ್ಕಾರ ಪರಿಗಣಿಸುತ್ತದೆ. ಎಲ್ಲಾ ಘೋಷಣೆಗಳನ್ನು ಪೂರ್ಣಗೊಳಿಸಬೇಕು ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕೋವಿಡ್ ಮಹಾಮಾರಿಯಿಂದ ಉಂಟಾಗಿರುವ ಬಿಕ್ಕಟ್ಟಿನಿಂದ ಸಾರ್ವಜನಿಕ ಶಿಕ್ಷಣವು ಚೇತರಿಸಿಕೊಳ್ಳುತ್ತಿರುವ ಹಂತ ಇದು. ಶಾಲೆಗಳು ದೀರ್ಘ ಕಾಲ ಮುಚ್ಚಿರುವುದರಿಂದ ನಮ್ಮ ಮಕ್ಕಳು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಆದಾಗ್ಯೂ, ಹಲವಾರು ಸಂಸ್ಥೆಗಳು ನಡೆಸಿದ ಅಧ್ಯಯನಗಳಲ್ಲಿ ಒಪ್ಪಿಕೊಂಡಿರುವಂತೆ ಕೇರಳವು ಡಿಜಿಟಲ್ ಶಿಕ್ಷಣವನ್ನು ಉನ್ನತ ಗುಣಮಟ್ಟಕ್ಕೆ ಜಾರಿಗೆ ತರಲು ಸಮರ್ಥವಾಗಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ. ಈ ಎಲ್ಲ ಸಾಧನೆಗಳನ್ನು ಪ್ರೇರೇಪಿಸುವ ಮೂಲಕ ಶಿಕ್ಷಣವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಂತಾಗಬೇಕು ಎಂದು ಸಿಎಂ ಹೇಳಿದರು.
ಶಾಲೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ನೂತನ ಕಟ್ಟಡದ ಫಲಕವನ್ನು ಶಾಸಕ ಎನ್.ಎ.ನೆಲ್ಲಿಕುನ್ನುಅನಾವರಣಗೊಳಿಸಿದರು. ಜಿಲ್ಲಾ ಪಂಚಾಯತ್ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಅಡ್ವ ಎಸ್.ಎನ್.ಸರಿತಾ, ಕಾಸರಗೋಡು ಡಯಟ್ ಪ್ರಾಂಶುಪಾಲ ಡಾ.ಎಂ.ಬಾಲನ್, ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್, ಸಮಗ್ರ ಶಿಕ್ಷಣ ಕೇರಳ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಪಿ.ರವೀಂದ್ರನ್, ಕೈಟ್ ಜಿಲ್ಲಾ ಸಂಯೋಜಕ ಪಿ.ರಾಜೇಶ್, ಜಿಲ್ಲಾ ಶಿಕ್ಷಣ ಮಹಾಸಂಯೋಜಕ ದಿಲೀಪ್ ಕುಮಾರ್ ಮಾತನಾಡಿದರು. ತಾ.ಪಂ.ಅಧ್ಯಕ್ಷ ಅಬ್ದುಲ್ ಹಮೀದ್ ಕರೋಟಿ ಸ್ವಾಗತಿಸಿ, ಶಾಲಾ ಮುಖ್ಯೋಪಾಧ್ಯಾಯ ಪಿ.ಬಾಲಕೃಷ್ಣ ವಂದಿಸಿದರು. ರಾಜ್ಯದಲ್ಲಿ 53 ಶಾಲಾ ಕಟ್ಟಡಗಳನ್ನು ಮುಖ್ಯಮಂತ್ರಿ ಉದ್ಘಾಟಿಸಿದರು.