ನವದೆಹಲಿ: ಎಲ್ಲಾ ಧರ್ಮದ ಜನರು ಶಾಲೆಗಳು ನಿರ್ದೇಶಿಸುವ ಸಮವಸ್ತ್ರ ಧರಿಸಲು ಸಿದ್ಧರಾಗಿರಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಹಿಜಾಬ್ ಪ್ರಕರಣದ ತೀರ್ಪನ್ನು ಕೋರ್ಟ್ ಒಪ್ಪಿಕೊಳ್ಳುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ. ಹಿಜಾಬ್ ವಿಚಾರವಾಗಿ ಇದೇ ಮೊದಲ ಬಾರಿಗೆ ಅಮಿತ್ ಶಾ ಪ್ರತಿಕ್ರಿಯಿಸಿದ್ದಾರೆ.
'ದೇಶವು ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ನ್ಯಾಯಾಲಯದ ಆದೇಶ ಪಾಲಿಸಲು ಎಲ್ಲರೂ ಸಿದ್ಧರಾಗಬೇಕು. ಶಾಲೆಗಳು ಸೂಚಿಸುವ ಬಟ್ಟೆ ಎಲ್ಲಾ ಧರ್ಮದವರೂ ಧರಿಸಲು ಸಿದ್ಧವಾಗಿರಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ' ಎಂದು ಅಮಿತ್ ಶಾ ಹೇಳಿದರು.
ಹಿಜಾಬ್ ವಿಷಯದಲ್ಲೂ ಕರ್ನಾಟಕ ಸರ್ಕಾರ ಇದೇ ನಿಲುವು ತಳೆದಿದೆ. ಈ ವಿಷಯವನ್ನು ಕರ್ನಾಟಕ ಹೈಕೋರ್ಟ್‌ನ ವಿಶಾಲ ಪೀಠವು ಪರಿಗಣಿಸುತ್ತಿದೆ.