ಮಂಜೇಶ್ವರ: ವರ್ಕಾಡಿ ಪೊಯ್ಯೆತ್ತಬೈಲ್ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ವತಿಯಿಂದ ಮಹಾಗಣಪತಿ ಹೋಮ, ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಹಾಗೂ 18ನೇ ವಾರ್ಷಿಕ ಭಜನಾ ಮಹೋತ್ಸವ ಫೆ. 26ರಂದು ಶ್ರೀ ಮಹಾವಿಷ್ಣುಮೂರ್ತಿ ಸಾನ್ನಿಧ್ಯದಲ್ಲಿ ಜರುಗಲಿದೆ.
ವೇದಮೂರ್ತಿ ಬೋಳಂತಕೋಡಿ ರಾಮ ಭಟ್ಟ ಅವರ ನೇತೃತ್ವದಲ್ಲಿ ದೇವಸ್ಥಾನ ಅರ್ಚಕ ಹರಿಪ್ರಸಾದ್ ಬಾಸ್ರಿತ್ತಾಯ ಕಾರ್ಯಕ್ರಮ ನಡೆಸಿಕೊಡುವರು. ಬೆಳಗ್ಗೆ 8ಕ್ಕೆ ಗಣಪತಿ ಹೋಮ, 8.30ರಿಂದ ಶ್ರೀ ಶನೈಶ್ಚರ ಪೂಜೆ, ಮಧ್ಯಾಹ್ನ 1ಗಂಟೆಗೆ ಮಹಾಸಂತರ್ಪಣೆ, ಸೂರ್ಯಾಸ್ತಮಾನದಿಂದ ಮರುದಿನ ಸೂರ್ಯೋದಯದ ವರೆಗೆ ಭಜನೆ ನಡೆಯುವುದು.