ಕಾಸರಗೋಡು: ಜಿಲ್ಲೆಯಲ್ಲಿ ಮಾದಕ ದ್ರವ್ಯ ಬಳಕೆ ಹರಡುವುದನ್ನು ತಡೆಯಲು ಸಾರ್ವಜನಿಕರು ಪೋಲೀಸರೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾ ಪೋಲೀಸ್ ವರಿಷ್ಠ ಡಾ.ವೈಭವ್ ಸಕ್ಸೇನಾ ಹೇಳಿದರು.
ಜನಮೈತ್ರಿ ಪೋಲೀಸ್ ಹಾಗೂ ರೋಟರಿ ಕ್ಲಬ್ ಜಂಟಿಯಾಗಿ ಆಯೋಜಿಸಿದ್ದ ಟ್ರಾಮಾಕೇರ್ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಟ್ರಾಕ್ ಅಧ್ಯಕ್ಷ ಎಂ.ಕೆ.ರಾಧಾಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಪೋಲೀಸ್ ಇನ್ಸ್ ಪೆಕ್ಟರ್ ಕೆ.ಅಜಿತ್ ಕುಮಾರ್, ಪೋಲೀಸ್ ಸಂಘದ ಜಿಲ್ಲಾ ಅಧಿಕಾರಿಗಳಾದ ಕೆ.ಸುರೇಶ್ ಮತ್ತು ಸಜಿತ್ ಪಟ್ನ, ಸಿಪಿಒ ಎ.ರಾಮಚಂದ್ರನ್, ಜನಮೈತ್ರಿ ಬೀಟ್ ಅಧಿಕಾರಿಗಳಾದ ಮಧು ಕರಕ್ಕಡವತ್ತು ಮತ್ತು ಎಚ್.ಎಸ್. ಆರ್ ಪ್ರವೀಣ್ ಕುಮಾರ್ ಮಾತನಾಡಿದರು. ತರಬೇತಿ ಪೂರ್ಣಗೊಳಿಸಿದವರಿಗೆ ಸ್ವಯಂಸೇವಕ ಕಾರ್ಡ್‍ಗಳನ್ನು ವಿತರಿಸಲಾಯಿತು.