HEALTH TIPS

'ಪುಷ್ಪ' ಮಡಿಲಿಗೆ ದಾದಾಸಾಹೇಬ್‌ ಫಾಲ್ಕೆ ಐಎಫ್‌ಎಫ್ ಪ್ರಶಸ್ತಿ: ಯಾರ‍್ಯಾರಿಗೆ ಒಲಿದಿದೆ ಅವಾರ್ಡ್‌? ಇಲ್ಲಿದೆ ವಿವರ.

            ನವದೆಹಲಿ: ಚಿತ್ರರಂಗ ಪ್ರತಿಷ್ಠಿತ ದಾದಾಸಾಹೇಬ್​ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ' ಪ್ರಕಟವಾಗಿದೆ. ಭಾರಿ ಪ್ರಚಾರ ಗಿಟ್ಟಿಸಿದ್ದ, ಬಾಕ್ಸ್​ ಆಫೀಸ್​ನಲ್ಲಿ 350 ಕೋಟಿ ರೂಪಾಯಿಗಿಂತಲೂ ಅಧಿಕ ಹಣ ಗಳಿಸಿ ಧೂಳೆಬ್ಬಿಸಿದ್ದ ನಟ ಅಲ್ಲು ಅರ್ಜುನ್​ ಅಭಿನಯದ ತೆಲುಗು ಚಿತ್ರ 'ಪುಷ್ಪ' ಸಿನಿಮಾ ವರ್ಷದ ಸಿನಿಮಾ ನಿರೀಕ್ಷೆಯಂತೆಯೇ 'ವರ್ಷದ ಚಿತ್ರ' ಎಂಬ ಬಿರುದು ಪಡೆದಿದೆ.

            ಶೇರ್​ಷಾ(ಉತ್ತಮ ಸಿನಿಮಾ), ರಣವೀರ್ ಸಿಂಗ್​(ಉತ್ತಮ ನಾಯಕ), ಕೃತಿ ಸನೋನ್​ ಉತ್ತಮ ನಾಯಕಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ವಿಕ್ಕಿ ಕೌಶಲ್​ ಅಭಿನಯದ 'ಸರ್ದಾರ್​ ಉದ್ಧಮ್​' ಸೇರಿದಂತೆ ಹಲವು ಸಿನಿಮಾಗಳು, ಹಲವಾರು ವೆಬ್​ ಸಿರೀಸ್​ ಮತ್ತು ಧಾರಾವಾಹಿಗಳೂ ಈ ಪ್ರಶಸ್ತಿಗೆ ಭಾಜನವಾಗಿವೆ. ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಹಿನ್ನೆಲೆಯಲ್ಲಿ ಬಾಲಿವುಡ್‌ನ ಹಿರಿಯ ನಟಿ ಆಶಾ ಪರೇಖ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ​

          ರಣವೀರ್​ ಸಿಂಗ್​ ನಟಿಸಿದ್ದ '83' ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಬಾಕ್ಸ್​ ಆಫೀಸ್​ನಲ್ಲಿ ಅಂದುಕೊಂಡ ಮಟ್ಟಕ್ಕೆ ಈ ಚಿತ್ರ ಗಳಿಕೆ ಮಾಡಲಿಲ್ಲ. ಆದರೆ ಕಪಿಲ್​ ದೇವ್​ ಪಾತ್ರದಲ್ಲಿ ರಣವೀರ್​ ಸಿಂಗ್​ ಮಾಡಿರುವ ಅಭಿನಯಕ್ಕೆ ಮನ್ನಣೆ ಸಿಕ್ಕಿದ್ದು, ಅವರು ಉತ್ತಮ ನಾಯಕನಾಗಿ ಹೊರಹೊಮ್ಮಿದ್ದಾರೆ. 1983ರಲ್ಲಿ ಕ್ರಿಕೆಟ್​ ವಿಶ್ವಕಪ್​ ಗೆದ್ದ ಭಾರತ ತಂಡವನ್ನು ಆಧರಿಸಿದ ಕಬೀರ್​ ಖಾನ್​ ನಿರ್ದೇಶನದಲ್ಲಿ ಈ ಚಿತ್ರ ತಯಾರು ಮಾಡಲಾಗಿದೆ.

ಉಳಿದಂತೆ ಯಾರ ಮಡಿಲಿಗೆ ಪ್ರಶಸ್ತಿ ಬಂದಿದೆ, ಇಲ್ಲಿದೆ ನೋಡಿ ಸಂಪೂರ್ಣ ಲಿಸ್ಟ್‌
ಅತ್ಯುತ್ತಮ ಸಿನಿಮಾ: ಶೇರ್​ಷಾ

ಅತ್ಯುತ್ತಮ ನಟ: ರಣವೀರ್​ ಸಿಂಗ್​

ಅತ್ಯುತ್ತಮ ನಟಿ: ಕೃತಿ ಸನೋನ್​

ಅತ್ಯುತ್ತಮ ನಿರ್ದೇಶಕ: ಕೆನ್​ ಘೋಷ್​

ಚಿತ್ರರಂಗಕ್ಕೆ ಅಪಾರ ಕೊಡುಗೆ: ಆಶಾ ಪರೇಖ್​

ಅತ್ಯುತ್ತಮ ಪೋಷಕ ನಟ: ಸತೀಶ್​ ಕೌಶಿಕ್​

ಅತ್ಯುತ್ತಮ ಫೋಷಕ ನಟಿ: ಲಾರಾ ದತ್ತಾ

ಅತ್ಯುತ್ತಮ ಖಳ ನಟ: ಆಯುಷ್​ ಶರ್ಮಾ

ವಿಮರ್ಶಕರ ಆಯ್ಕೆಯ ಅತ್ಯುತ್ತಮ ಚಿತ್ರ: ಸರ್ದಾರ್​ ಉದ್ಧಮ್​

ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟ: ಸಿದ್ದಾರ್ಥ್​ ಮಲ್ಹೋತ್ರ

ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟಿ ಕಿಯಾರಾ ಅಡ್ವಾಣಿ

ಜನರ ಆಯ್ಕೆಯ ಅತ್ಯುತ್ತಮ ನಟ: ಅಭಿಮನ್ಯು ದಾಸಾನಿ

ಜನರ ಆಯ್ಕೆಯ ಅತ್ಯುತ್ತಮ ನಟಿ: ರಾಧಿಕಾ ಮದನ್​

ಅತ್ಯುತ್ತಮ ಹೊಸ ನಟ: ಅಹಾನ್​ ಶೆಟ್ಟಿ

ಅತ್ಯುತ್ತಮ ವಿದೇಶಿ ಸಿನಿಮಾ: ಅನದರ್​ ರೌಂಡ್​

ಅತ್ಯುತ್ತಮ ವೆಬ್​ ಸಿರೀಸ್​: ಕ್ಯಾಂಡಿ

ವೆಬ್​ ಸಿರೀಸ್​ನಲ್ಲಿ ಅತ್ಯುತ್ತಮ ನಟ: ಮನೋಜ್​ ಭಾಜಪೇಯಿ​

ವೆಬ್​ ಸಿರೀಸ್​ನಲ್ಲಿ ಅತ್ಯುತ್ತಮ ನಟಿ: ರವೀನಾ ಟಂಡನ್​

ವರ್ಷದ ಅತ್ಯುತ್ತಮ ಟಿವಿ ಧಾರಾವಾಹಿ: ಅನುಪಮಾ

ಕಿರುತೆರೆಯ ಅತ್ಯುತ್ತಮ ನಟ: ಶಾಹೀರ್​ ಶೇಖ್​

ಕಿರುತೆರೆಯ ಅತ್ಯುತ್ತಮ ನಟಿ: ಶ್ರದ್ಧಾ ಆರ್ಯ

ಕಿರುತೆರೆಯ ಭರವಸೆಯ ನಟ: ಧೀರಜ್​ ಧೂಪರ್​

ಕಿರುತೆರೆಯ ಭರವಸೆಯ ನಟಿ: ರೂಪಾಲಿ ಗಂಗೂಲಿ

ಅತ್ಯುತ್ತಮ ಕಿರುಚಿತ್ರ: ಪೌಲಿ

ಅತ್ಯುತ್ತಮ ಹಿನ್ನೆಲೆ ಗಾಯಕ: ವಿಶಾಲ್​ ಮಿಶ್ರಾ

ಅತ್ಯುತ್ತಮ ಹಿನ್ನೆಲೆ ಗಾಯಕಿ: ಕನಿಕಾ ಕಪೂರ್​

ಅತ್ಯುತ್ತಮ ಛಾಯಾಗ್ರಹಣ: ಜಯಕೃಷ್ಣ ಗುಮ್ಮಡಿ

ಅತ್ಯುತ್ತಮ ನಟ: ರಣವೀರ್​ ಸಿಂಗ್​

ಅತ್ಯುತ್ತಮ ನಟಿ: ಕೃತಿ ಸನೋನ್​

ಅತ್ಯುತ್ತಮ ನಿರ್ದೇಶಕ: ಕೆನ್​ ಘೋಷ್​

ಚಿತ್ರರಂಗಕ್ಕೆ ಅಪಾರ ಕೊಡುಗೆ: ಆಶಾ ಪರೇಖ್​

ಅತ್ಯುತ್ತಮ ಪೋಷಕ ನಟ: ಸತೀಶ್​ ಕೌಶಿಕ್​

ಅತ್ಯುತ್ತಮ ಫೋಷಕ ನಟಿ: ಲಾರಾ ದತ್ತಾ

ಅತ್ಯುತ್ತಮ ಖಳ ನಟ: ಆಯುಷ್​ ಶರ್ಮಾ

ವಿಮರ್ಶಕರ ಆಯ್ಕೆಯ ಅತ್ಯುತ್ತಮ ಚಿತ್ರ: ಸರ್ದಾರ್​ ಉದ್ಧಮ್​

ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟ: ಸಿದ್ದಾರ್ಥ್​ ಮಲ್ಹೋತ್ರ

ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟಿ ಕಿಯಾರಾ ಅಡ್ವಾಣಿ

ಜನರ ಆಯ್ಕೆಯ ಅತ್ಯುತ್ತಮ ನಟ: ಅಭಿಮನ್ಯು ದಾಸಾನಿ

ಜನರ ಆಯ್ಕೆಯ ಅತ್ಯುತ್ತಮ ನಟಿ: ರಾಧಿಕಾ ಮದನ್​

ಅತ್ಯುತ್ತಮ ಹೊಸ ನಟ: ಅಹಾನ್​ ಶೆಟ್ಟಿ

ಅತ್ಯುತ್ತಮ ವಿದೇಶಿ ಸಿನಿಮಾ: ಅನದರ್​ ರೌಂಡ್​

ಅತ್ಯುತ್ತಮ ವೆಬ್​ ಸಿರೀಸ್​: ಕ್ಯಾಂಡಿ

ವೆಬ್​ ಸಿರೀಸ್​ನಲ್ಲಿ ಅತ್ಯುತ್ತಮ ನಟ: ಮನೋಜ್​ ಭಾಜಪೇಯಿ​

ವೆಬ್​ ಸಿರೀಸ್​ನಲ್ಲಿ ಅತ್ಯುತ್ತಮ ನಟಿ: ರವೀನಾ ಟಂಡನ್​

ವರ್ಷದ ಅತ್ಯುತ್ತಮ ಟಿವಿ ಧಾರಾವಾಹಿ: ಅನುಪಮಾ

ಕಿರುತೆರೆಯ ಅತ್ಯುತ್ತಮ ನಟ: ಶಾಹೀರ್​ ಶೇಖ್​

ಕಿರುತೆರೆಯ ಅತ್ಯುತ್ತಮ ನಟಿ: ಶ್ರದ್ಧಾ ಆರ್ಯ

ಕಿರುತೆರೆಯ ಭರವಸೆಯ ನಟ: ಧೀರಜ್​ ಧೂಪರ್​

ಕಿರುತೆರೆಯ ಭರವಸೆಯ ನಟಿ: ರೂಪಾಲಿ ಗಂಗೂಲಿ

ಅತ್ಯುತ್ತಮ ಕಿರುಚಿತ್ರ: ಪೌಲಿ

ಅತ್ಯುತ್ತಮ ಹಿನ್ನೆಲೆ ಗಾಯಕ: ವಿಶಾಲ್​ ಮಿಶ್ರಾ

ಅತ್ಯುತ್ತಮ ಹಿನ್ನೆಲೆ ಗಾಯಕಿ: ಕನಿಕಾ ಕಪೂರ್​

ಅತ್ಯುತ್ತಮ ಛಾಯಾಗ್ರಹಣ: ಜಯಕೃಷ್ಣ ಗುಮ್ಮಡಿ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries