ತಿರುವನಂತಪುರ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಪ್ರಕಟಿಸಿದ ಬೆನ್ನಲ್ಲೇ ರಾಜ್ಯ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಟೀಕಿಸಿದ್ದಾರೆ. ಕೇರಳವನ್ನು ಬಜೆಟ್‌ನಲ್ಲಿ ಸರಿಯಾಗಿ ಪರಿಗಣಿಸಲಾಗಿಲ್ಲ ಮತ್ತು ಬಿಕ್ಕಟ್ಟನ್ನು ಎದುರಿಸಲು ಬಜೆಟ್‌ನಲ್ಲಿ ಯಾವುದೇ ಸಿದ್ಧತೆಗಳಿಲ್ಲ. ರೈತರಿಗೆ ನೆರವಾಗುವ ಯಾವುದೇ ಯೋಜನೆಗಳು ಬಜೆಟ್‌ನಲ್ಲಿ ಇಲ್ಲ ಎಂದು ಅವರು ಹೇಳಿದರು.
ಕೇರಳ ಭಾರಿ ನಿರೀಕ್ಷೆಯೊಂದಿಗೆ ಬಜೆಟ್ ನ್ನು ನಿರೀಕ್ಷಿಸಿತ್ತು. ಆದರೆ ರಾಜ್ಯದ ಯಾವ ಅಗತ್ಯಗಳನ್ನೂ ಪರಿಗಣಿಸಿಲ್ಲ. ಏಮ್ಸ್‌ಗಾಗಿ ಕೇರಳದ ಬಹುಕಾಲದ ಬೇಡಿಕೆ ಈಡೇರಿಲ್ಲ. ಲಸಿಕೆಗೆ ಅಲ್ಪ ಮೊತ್ತವನ್ನು ಮಾತ್ರ ಮೀಸಲಿಡಲಾಗಿತ್ತು. ನಿರುದ್ಯೋಗ ನಿವಾರಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.