ಬದಿಯಡ್ಕ: ಇತ್ತೀಚೆಗೆ ಅಗಲಿದ ಹಿರಿಯ ಬಿಜೆಪಿ ನೇತಾರ, ಬದಿಯಡ್ಕ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಸುಂದರ ಪ್ರಭು ಅವರಿಗೆ ಸಂತಾಪ ಸೂಚಕ ಸಭೆ ಬಿಜೆಪಿ ಬದಿಯಡ್ಕ ಮಂಡಲ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು. ಮಂಡಲಾಧ್ಯಕ್ಷ ಹರೀಶ್ ನಾರಂಪಾಡಿ ಅಧ್ಯಕ್ಷತೆಯನ್ನು ವಹಿಸಿದ್ದರು. ಅಟಲ್‍ಜೀ ಟ್ರಸ್ಟ್ ಬಿ.ಜ್ಞಾನದೇವ ಶೆಣೈ ಬಿ.ಸುಂದರ ಪ್ರಭು ಅವರೊಂದಿಗೆ ತಮ್ಮ ಒಡನಾಟವನ್ನು ಹಾಗೂ ಅವರ ಕೆಲಸಕಾರ್ಯಗಳ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಬಿಜೆಪಿ ಜಿಲ್ಲಾ ಪ್ರಧಾನ ಉಪಾಧ್ಯಕ್ಷ ಎಂ.ಸುಧಾಮ ಗೋಸಾಡ, ಬದಿಯಡ್ಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಬಿ.ಲಕ್ಷ್ಮಣ ಪ್ರಭು, ಸಹಕಾರ ಭಾರತಿಯ ಪದ್ಮರಾಜ ಪಟ್ಟಾಜೆ ಮಾತನಾಡಿದರು.
ಬಿಎಂಎಸ್‍ನ ರವಿ, ವಿಶ್ವಹಿಂದೂಪರಿಷತ್‍ನ ಹರೀಶ್ ಪುತ್ರಕಳ, ಭಾಸ್ಕರ ಬಿ., ಧನ್ಯಕುಮಾರ್, ವಕೀಲ ಗಣೇಶ್ ಬಿ., ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ಪಿ.ಆರ್. ಹಾಗೂ ಗೋಪಾಲಕೃಷ್ಣ ಎಂ ಮತ್ತು ಪಕ್ಷದ ನೇತಾರರು, ಕಾರ್ಯಕರ್ತರು ಸಬೆಯಲ್ಲಿ ಪಾಲ್ಗೊಂಡಿದ್ದರು.