HEALTH TIPS

ಭಾವಿ ವೈದ್ಯರ ನಕಲಿನ ರೀತಿ ನೋಡಿ ಪರೀಕ್ಷಕರೇ ಸುಸ್ತು! ಕಣ್ಣಿಗೆ ಕಾಣದ ಸಾಧನದಿಂದ ಕಾಪಿ

             ಇಂದೋರ್​: ಎಂಬಿಬಿಎಸ್​ ಅಂತಿಮ ವರ್ಷದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಮಾಡಿರುವ ಕಾಪಿಯ ರೀತಿ ನೋಡಿ ಖುದ್ದು ಪರೀಕ್ಷಕರೇ ಕಂಗಾಲಾಗಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ.

           ಅಹಲ್ಯಾ ವಿಶ್ವವಿದ್ಯಾಲಯದಲ್ಲಿ (ಡಿಎವಿವಿ) ಎಂಬಿಬಿಎಸ್​ ಅಂತಿಮ ವರ್ಷದ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ನಕಲು ಮಾಡುತ್ತಿದ್ದ ವಿದ್ಯಾರ್ಥಿಗಳ ಭಯಾನಕ ರಹಸ್ಯವನ್ನು ಡೆಪ್ಯುಟಿ ರಿಜಿಸ್ಟ್ರಾರ್ ರಚನಾ ಠಾಕೂರ್ ನೇತೃತ್ವದ ಫ್ಲೈಯಿಂಗ್ ಸ್ಕ್ವಾಡ್ ಭೇದಿಸಿದೆ.

            ಅಷ್ಟಕ್ಕೂ ಇವರು ಮಾಡಿದ್ದು ಏನೆಂದರೆ ಒಬ್ಬ ವಿದ್ಯಾರ್ಥಿ ಉಡುಪಿನ ಒಳಭಾಗದಲ್ಲಿ ಸಣ್ಣ ಬ್ಲೂಟೂತ್ ಸಾಧನವನ್ನು ಹೊಲಿದುಕೊಂಡಿದ್ದು, ಅದಕ್ಕೆ ಅವನ ಕಾಲರ್‌ಗೆ ಹೊಂದುವ ರೀತಿ ತೆಳುವಾದ ತಂತಿಯೊಂದಿಗೆ ಸಂಪರ್ಕ ಕಲ್ಪಿಸಿದ್ದ. ಈ ಸಾಧನವು ಗೋಚರಿಸದೇ ಕೇವಲ ಬ್ಲೂಟೂತ್ ಸಾಧನಕ್ಕೆ ಸಂಪರ್ಕಗೊಳ್ಳುವಂತೆ ರಚನೆ ಮಾಡಿದ್ದ.

             ಇದು ಒಂದೆಡೆಯಾದರೆ, ಇನ್ನೋರ್ವನ ಜೇಬಿನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ. ಕೆಲವು ಬ್ಲೂಟೂತ್ ಸಾಧನಕ್ಕೆ ಸಂಪರ್ಕಗೊಂಡಿರುವ ಮೊಬೈಲ್ ಫೋನ್‌ನಲ್ಲಿ ಕರೆ ಚಾಲನೆಯಲ್ಲಿದ್ದದ್ದು ಪರೀಕ್ಷಕರ ಗಮನಕ್ಕೆ ಬಂದಿದೆ. ಇಬ್ಬರೂ ವಿದ್ಯಾರ್ಥಿಗಳ ಕಿವಿಗೆ ಮೈಕ್ರೋ ಸೈಜ್ ಬ್ಲೂಟೂತ್ ಸಾಧನಗಳನ್ನು ಅಳವಡಿಸಿಕೊಂಡಿದ್ದರೂ ಅದು ನಮಗೆ ತಕ್ಷಣ ಗೋಚರಿಸಲಿಲ್ಲ. ನಾವು ಸಾಧನ ಮತ್ತು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದೇವೆ ಎಂದಿದ್ದಾರೆ ಪರೀಕ್ಷಕರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries