HEALTH TIPS

ಕ್ಷೇತ್ರ ಪುನರ್ವಿಂಗಡಣೆ ಆಯೋಗದ ಕರಡು ವರದಿಯಲ್ಲಿ ಕಾಶ್ಮೀರ ವಿಭಾಗದಲ್ಲಿ ಭಾರೀ ಬದಲಾವಣೆಗಳ ಪ್ರಸ್ತಾವ

               ಶ್ರೀನಗರ: ಕ್ಷೇತ್ರ ಪುನರ್ವಿಂಗಡಣೆ ಆಯೋಗವು ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳಲ್ಲಿ ಭಾರೀ ಬದಲಾವಣೆಗಳನ್ನು ಪ್ರಸ್ತಾಪಿಸಿದ್ದು,ಇದು ಜನರಲ್ಲಿ ಅತೃಪ್ತಿಯನ್ನು ಹುಟ್ಟುಹಾಕಿದೆ.

           ಜಮ್ಮು ಪ್ರದೇಶದಿಂದ ರಾಜೌರಿ ಮತ್ತು ಪೂಂಛ್ ಗಳನ್ನು ಸೇರ್ಪಡೆಗೊಳಿಸುವ ಮೂಲಕ ಅನಂತನಾಗ್ ಲೋಕಸಭಾ ಕ್ಷೇತ್ರದ ಪುನರ್ರಚನೆಯನ್ನು ಆಯೋಗದ ಕರಡು ವರದಿಯಲ್ಲಿ ಪ್ರಸ್ತಾವಿಸಲಾಗಿದೆ.

              ಇದೇ ವೇಳೆ ಕಾಶ್ಮೀರ ವಿಭಾಗದಲ್ಲಿ ಭಾರೀ ಬದಲಾವಣೆಗಳನ್ನು ಮಾಡಲಾಗಿದೆ.

ವಲಸಿಗ ಕಾಶ್ಮೀರ ಪಂಡಿತರ ಸಾಂಪ್ರದಾಯಿಕ ಭದ್ರಕೋಟೆ ಎಂದು ಪರಿಗಣಿಸಲಾಗಿರುವ ಹಬ್ಬಾ ಕಡಾಲ್ ಸೇರಿದಂತೆ ಹಿಂದಿನ ಜಮ್ಮು-ಕಾಶ್ಮೀರ ರಾಜ್ಯದ ಹಲವಾರು ವಿಧಾನಸಭಾ ಕ್ಷೇತ್ರಗಳು ಮಾಯವಾಗಿವೆ. ಅನಂತನಾಗ್ ಲೋಕಸಭಾ ಕ್ಷೇತ್ರದ ಭಾಗವಾಗಿದ್ದ ಪುಲ್ವಾಮಾ,ಟ್ರಾಲ್ ಮತ್ತು ಶೋಪಿಯಾನ್ನ ಕೆಲವು ಪ್ರದೇಶಗಳನ್ನು ಶ್ರೀನಗರ ಲೋಕಸಭಾ ಕ್ಷೇತ್ರಕ್ಕೆ ಸೇರಿಸಲಾಗಿದೆ.

ಆಯೋಗದ ಪ್ರಸ್ತಾವದಂತೆ ಬಾರಾಮುಲ್ಲಾ ಕುಂಜೇರ್ ಮತ್ತು ತಂಗಮಾರ್ಗ್ ಹೀಗೆ ಎರಡು ನೂತನ ವಿಧಾನಸಭಾ ಕ್ಷೇತ್ರಗಳನ್ನು ಪಡೆದುಕೊಂಡಿದೆ ಮತ್ತು ಹಾಲಿ ಸಂಗ್ರಾಮ ಕ್ಷೇತ್ರವನ್ನು ತಂಗಮಾರ್ಗ್ನೊಂದಿಗೆ ವಿಲೀನಗೊಳಿಸಲಾಗಿದೆ.

                 ಕುಪ್ವಾರಾ ಜಿಲ್ಲೆಯಲ್ಲಿ ತ್ರೆಹ್ಗಾಮ್ ನೂತನ ವಿಧಾನಸಭಾ ಕ್ಷೇತ್ರವನ್ನು ಪ್ರಸ್ತಾವಿಸಿರುವ ಆಯೋಗವು,ಕ್ರಾಲಪೋರಾ ತಾಲೂಕನ್ನು ಕರ್ನಾ ಕ್ಷೇತ್ರಕ್ಕೆ ಸೇರಿಸಿದೆ. ಇದೇ ರೀತಿ ದ.ಕಾಶ್ಮೀರದಲ್ಲಿ ಶಾಂಗುಸ್ ಕ್ಷೇತ್ರವನ್ನು ಅನಂತನಾಗ್ ಪೂರ್ವ ಮತ್ತು ಲೆರ್ನೂ ಕ್ಷೇತ್ರಗಳ ನಡುವೆ ವಿಭಜಿಸಲಾಗಿದೆ. ಶ್ರೀನಗರ ಜಿಲ್ಲೆಯಲ್ಲಿ ಚಾನ್ಪೋರಾ ನೂತನ ಕ್ಷೇತ್ರವಾಗಿದ್ದು, ಸಂಪೂರ್ಣ ಚಾನ್ಪೋರಾ ತಾಲೂಕನ್ನು ಒಳಗೊಂಡಿದೆ.

                  ಹೋಮ್ ಶಾಲಿ ಬೇಗ್ ಕ್ಷೇತ್ರವನ್ನೂ ಕುಲ್ಗಾಮ್ ಜಿಲ್ಲೆಯಿಂದ ಅಳಿಸಲಾಗಿದೆ.

ಪುನರ್ವಿಂಗಡಣಾ ಆಯೋಗವು ಇಂತಹ ಅನನುಕೂಲಕರ ಮತ್ತು ತರ್ಕಬದ್ಧವಲ್ಲದ ಪ್ರಸ್ತಾವವನ್ನು ಮಾಡಿರುವುದು ಆಘಾತಕಾರಿಯಾಗಿದೆ. ಸಂಗ್ರಾಮ ಕ್ಷೇತ್ರವನ್ನ ತಂಗಮಾರ್ಗ್ನೊಂದಿಗೆ ವಿಲೀನಗೊಳಿಸುವ ಮೂಲಕ ಮತದಾರರಿಗೆ ಭಾರೀ ಅನನಕೂಲವನ್ನುಂಟು ಮಾಡಲಾಗಿದೆ ಎಂದು ಸಂಗ್ರಾಮದ ರಾಜಕೀಯ ನಾಯಕರೋರ್ವರು ಸುದ್ದಿಗಾರರಿಗೆ ತಿಳಿಸಿದರು. ಇದು ಬಲಹೀನಗೊಳಿಸುವ ಮತ್ತು ಜನವಿರೋಧಿ ಪ್ರಸ್ತಾವವಾಗಿದೆ ಎಂದರು. ಈ ನಡುವೆ ಆಯೋಗವು ಫೆ.4ರಂದು ತನ್ನ ಕರಡು ವರದಿಯನ್ನು ಸಲಹೆ-ಸೂಚನೆಗಳಿಗಾಗಿ ಐವರು ಸಹವರ್ತಿ ಸದಸ್ಯರಿಗೆ ಹಸ್ತಾಂತರಿಸಿದ್ದು,ಅದನ್ನು ನ್ಯಾಷನಲ್ ಕಾನ್ಫರೆನ್ಸ್ ತಿರಸ್ಕರಿಸಿದೆ.

          ತಮ್ಮ ಸಲಹೆ-ಸೂಚನೆಗಳನ್ನು ಫೆ.14ರೊಳಗೆ ಸಲ್ಲಿಸುವಂತೆ ಆಯೋಗವು ಈ ಸದಸ್ಯರಿಗೆ ತಿಳಿಸಿದ್ದು,ಆ ಬಳಿಕ ವರದಿಯನ್ನು ಸಾರ್ವಜನಿಕ ಅವಗಾಹನೆಗೆ ಇಡಲಾಗುವುದು ಎಂದು ಹೇಳಿದೆ.

ಜಮ್ಮು ಪ್ರದೇಶದಲ್ಲಿ ಆರು ಮತ್ತು ಕಾಶ್ಮೀರ ವಿಭಾಗದಲ್ಲಿ ಕೇವಲ ಒಂದು ವಿಧಾನಸಭಾ ಕ್ಷೇತ್ರಗಳನ್ನು ಹೆಚ್ಚಿಸುವ ಪ್ರಸ್ತಾಪವನ್ನು ತಿರಸ್ಕರಿಸಿ ನ್ಯಾಷನಲ್ ಕಾನ್ಫರೆನ್ಸ್ ಕಳೆದ ವರ್ಷದ ಡಿ.31ರಂದು ಸಲ್ಲಿಸಿದ್ದ ಆಕ್ಷೇಪವನ್ನು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶೆ ರಂಜನಾ ದೇಸಾಯಿ ನೇತೃತ್ವದ ಆಯೋಗವು ಕಡೆಗಣಿಸಿದೆ. 2020,ಮಾ.6ರಂದು ನೇಮಕಗೊಳಿಸಿದ್ದ ಆಯೋಗದ ಅಧಿಕಾರಾವಧಿಯನ್ನು 2021,ಮಾ.6ರಂದು ಒಂದು ವರ್ಷ ವಿಸ್ತರಿಸಲಾಗಿತ್ತು. ಮುಂದಿನ ತಿಂಗಳು ಈ ವಿಸ್ತರಣೆ ಅಂತ್ಯಗೊಳ್ಳಲಿದೆ.

              ಪುನರ್ವಿಂಗಡಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಜಮ್ಮು-ಕಾಶ್ಮೀರದಲ್ಲಿ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 83ರಿಂದ 90ಕ್ಕೆ ಹೆಚ್ಚಲಿದೆ. ಹಿಂದಿನ ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಕಾಶ್ಮೀರ 46,ಜಮ್ಮು 37 ಮತ್ತು ಲಡಾಖ್ ನಾಲ್ಕು ಸ್ಥಾನಗಳನ್ನು ಹೊಂದಿದ್ದವು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries