ಮಧೂರು: ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮಾರ್ಚ್ 2, 3 ಮತ್ತು 4 ರಂದು ನಡೆಯಲಿದ್ದು, ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಪ್ರಾಯೋಜಕತ್ವದಲ್ಲಿ ಸಾಂಸ್ಕøತಿಕ, ಧಾರ್ಮಿಕ ಕಾರ್ಯಕ್ರಮಗಳು ಜರಗಲಿದೆ.
ಸಾಂಸ್ಕøತಿಕ, ಧಾರ್ಮಿಕ ಸಭಾ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಸಾಂಸ್ಕøತಿಕ, ಧಾರ್ಮಿಕ ಸಭಾ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ ಅವರು ದೇವಸ್ಥಾನದ ಪಾತ್ರಿ ಪ್ರವೀಣ್ ನಾಯಕ್ ಪಾಂಗೋಡು ಅವರಿಗೆ ನೀಡಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ದೇವಸ್ಥಾನದ ಅಧ್ಯಕ್ಷ ರಮೇಶ್ ಕುದ್ರೆಕ್ಕೋಡು ಕುಂಬಳೆ, ಹರಿದಾಸ್ ಜಯಾನಂದ ಕುಮಾರ್ ಹೊಸದುರ್ಗ, ಹರೀಶ್ ಪಾಂಗೋಡು ಕೂಡ್ಲು, ನವೀನ್ ನಾಯಕ್ ಪಾಂಗೋಡು, ವೇಣು ಕಾಸರಗೋಡು, ಪ್ರದೀಪ್ ನಾಯಕ್, ಪವನ್ ನಾಯಕ್, ವಿಘ್ನೇಶ್ ಪಳ್ಳಿಕೆರೆ, ಅನಂತಪದ್ಮನಾಭ ನಾಗರಕಟ್ಟೆ, ಕನ್ನಡ ಭವನದ ಕೋಶಾಧಿಕಾರಿ ಸಂಧ್ಯಾರಾಣಿ ಟೀಚರ್, ಪ್ರದೀಪ್ ಬೇಕಲ್ ಮೊದಲಾದವರು ಉಪಸ್ಥಿತರಿದ್ದರು.
ಕನ್ನಡ ಭವನ ಸ್ಥಾಪಕ ವಾಮನ್ ರಾವ್ ಬೇಕಲ್ ಸ್ವಾಗತಿಸಿ, ಕಾರ್ಯದರ್ಶಿ ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.