ಮಾಸ್ಕೋ: ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ವಿರುದ್ಧ ಜಾಗತಿಕ ಸಮುದಾಯದಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಇತ್ತ ಜಾಗತಿಕ ಮಟ್ಟದಲ್ಲಿ ರಷ್ಯಾಗೆ ತೀವ್ರ ಮುಖಭಂಗವಾಗಿದೆ.
ರಷ್ಯಾ ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿದ ಬೆನ್ನಲ್ಲೇ ಜಗತ್ತಿನ ಬಹುತೇಕ ರಾಷ್ಟ್ರಗಳು ರಷ್ಯಾಗೆ ವಾಯುಮಾರ್ಗ ಸ್ಥಗಿತಗೊಳಿಸಿವೆ. ಇದೇ ಕಾರಣಕ್ಕೆ ಇದೀಗ ರಷ್ಯಾ ವಿದೇಶಾಂಗ ಸಚಿವರ ವಿಶ್ವಸಂಸ್ಥೆ ಪ್ರವಾಸ ರದ್ದಾಗುವಂತಾಗಿದೆ.
ರಷ್ಯಾ ವಿದೇಶಾಂಗ ಸಚಿವ ಲಾವ್ರೋವ್ ಅವರು ಜಿನೀವಾದಲ್ಲಿರುವ ವಿಶ್ವಸಂಸ್ಥೆಗೆ ಮಹತ್ವದ ಭೇಟಿ ನಿಮಿತ್ತ ಪ್ರಯಾಣ ಮಾಡಬೇಕಿತ್ತು. ಆದರೆ, ಯೂರೋಪಿನಯನ್ ಒಕ್ಕೂಟದ ಬಹುತೇಕ ರಾಷ್ಟ್ರಗಳು ರಷ್ಯಾಗೆ ತಮ್ಮ ವಿಮಾನಯಾನ ಮಾರ್ಗವನ್ನು ಮುಚ್ಚಿದ್ದು, ಇದರಿಂದ ಪ್ರಯಾಣ ಮಾಡಲಾಗದೇ ಲಾವ್ರೋವ್ ತಮ್ಮ ಪ್ರಯಾಣವನ್ನು ರದ್ದುಗೊಳಿಸಿದ್ದಾರೆ. ಆ ಮೂಲಕ ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾದರೂ ವಾಯುಮಾರ್ಗ ಮುಚ್ಚಿದ್ದರಿಂದ ಮಹತ್ವ ಸಭೆಗೆ ರಷ್ಯಾ ಗೈರು ಹಾಜರಾಗದಂತಾಗಿದೆ.
ರಷ್ಯಾಗೆ ಯಾವ ಯಾವ ದೇಶಗಳು ವಾಯುಮಾರ್ಗ ಮುಚ್ಚಿವೆ?
ಜಗತ್ತಿನ ಬಹುತೇಕ ರಾಷ್ಟ್ರಗಳು ರಷ್ಯಾಗೆ ತಮ್ಮ ವಾಯುಮಾರ್ಗ ಮುಚ್ಚಿದ್ದು, ಈ ಪಟ್ಟಿಯಲ್ಲಿ ಪ್ರಧಾನವಾಗಿ ಅಮೆರಿಕ, ಬ್ರಿಟನ್, ಆಸ್ಚ್ರೇಲಿಯಾ, ಬೆಲ್ಜಿಯಂ, ಕೆನಡಾ, ಲುಕ್ಸಂಬರ್ಗ್, ಬಲ್ಗೇರಿಯ, ಪೋಲೆಂಡ್, ಜೆಕ್ ಗಣರಾಜ್ಯ, ಈಸ್ಟೊನಿಯ, ಲಾಟ್ವಿಯಾ, ಲಿಥುವೇನಿಯಾ, ಜೆರ್ಮನಿ, ಸ್ಲೋವೇನಿಯಾ, ಫಿನ್‌ಲ್ಯಾಂಡ್ ಮತ್ತು ಡೆನ್ಮಾರ್ಕ್ ದೇಶಗಳು ಕೂಡ ರಷ್ಯಾ ವಿಮಾನಗಳಿಗೆ ತಮ್ಮ ವಾಯುಮಾರ್ಗವನ್ನು ಮುಚ್ಚಿವೆ.