ಮುಳ್ಳೇರಿಯ: ಮುಳಿಯಾರು ಗ್ರಾಮದ ಚೆಮ್ಬಲಾಂಗುಯಿ, ಮುನಿಯಂಗಳ, ಕೊಳಂಬೆ, ಅತ್ತಿಕ್ಕಯೆ, ನೀರಳಪ್ಪು ಮೊದಲಾದ ಸ್ಥಳಗಳಲ್ಲಿ ಕೃಷಿ ಕ್ಷೇತ್ರಗಳಿಗೆ ಆನೆಗಳು ನುಗ್ಗಿ ವಿಪರೀತ ನಾಶನಷ್ಟಗಳನ್ನುಂಟುಮಾಡುತ್ತಾ ಇವೆ. ಕೆಲವು ಸಮಯಗಳಿಂದ ಈ ಪರಿಸರದಲ್ಲಿ ನಿರಂತರವಾಗಿ ಆನೆಗಳ ಉಪಟಳ ಸಾಗುತ್ತಾ ಇದ್ದು ಪರಿಸ್ಥಿತಿ ದುರಂತವಾಗಿದೆ.
ಮುನಿಯಂಗಳದ ಸಮೀಪ ಚೊಟ್ಟೆ ಕೊಳಂಬೆ ಶಂಕರ ಭಟ್, ಅತ್ತಿಕ್ಕಯೆ ಶ್ರೀಕೃಷ್ಣ ಭಟ್, ಮುನಿಯಂಗಳ ರಾಧಾಕೃಷ್ಣ ಭಟ್, ಕುಂಜಿರಾಮನ್ ನಾಯರ್, ನಾರಾಯಣನ್ ನಾಯರ್ ಮತ್ತು ಆ ಪರಿಸರದ ಹಲವು ಕೃಷಿಕ ಬಾಂಧವರ ಸ್ಥಳಗಳಿಗೆ ಆನೆಗಳು ಹಾವಳಿ ಮಾಡುತ್ತಾ ಇದ್ದು ಸ್ಥಿತಿ ಗಂಭೀರವಾಗಿದೆ.
ಮುಳ್ಳೇರಿಯ ಹವ್ಯಕ ಮಂಡಲ ಚಂದ್ರಗಿರಿ ವಲಯದ ಸಹಾಯ ಪ್ರಧಾನ ಡಾ ಶ್ರೀಕೃಷ್ಣ ರಾಜ ಕಾಟಿಪಳ್ಳ ಅವರ ನೇತೃತ್ವದಲ್ಲಿ ಈ ಮನೆಗಳನ್ನು ಭೇಟಿ ಮಾಡಿ ಹಾಳುಗೆಡವಿದ ಸ್ಥಳಗಳನ್ನು ಸಂದರ್ಶನ ಮಾಡಲಾಯಿತು. ಈ ಮನೆಯವರ ಸ್ಥಳಗಳನ್ನು ಸಂದರ್ಶಿಸಿ ಮನೆಯವರನ್ನು ಕಂಡು ಸಾಂತ್ವನ ಮಾಡಲಾಯಿತು.
ತಂಡದಲ್ಲಿ ಚಂದ್ರಗಿರಿ ವಲಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಮೀನಗದ್ದೆ, ಮಂಡಲ ಮಾತೃ ಪ್ರಧಾನೆ ಗೀತಾ ಲಕ್ಷ್ಮಿ ಅನಘ, ಮಂಡಲ ಶಿಷ್ಯ ಮಾಧ್ಯಮ ಪ್ರಧಾನ ಗೋವಿಂದ ಬಳ್ಳಮೂಲೆ ಇವರುಗಳು ಜೊತೆಗಿದ್ದರು.