ಅಹಮದಾಬಾದ್: ಜನರ ಸಂಪರ್ಕವನ್ನು ಕಡಿದುಕೊಳ್ಳದಿರುವಂತೆ ಗುಜರಾತಿನ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.
ಅಹಮದಾಬಾದಿನ ಚಿಂತನ ಶಿಬಿರದಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ ಇದೇ ವೇಳೆ ದ್ವಾರಕಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗದೆ ಎಸಿ ರೂಮಿನಲ್ಲಿ ಕುಳಿತು ಭಾಷ್ಃಅಣ ಬಿಗಿಯುವ ನಾಯಕರು ತಮಗೆ ಬೇಡ ಎಂದು ಅವರು ಎಚ್ಚರಿಸಿದ್ದಾರೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಈ ಸಲಹೆ ನೀಡಿದ್ದಾರೆ.